ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ
ಪರಿಯ ಚಿಂತಿಸಿ ರಕ್ಷಿಸೊ
ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ
ಚರಣರಹಿತ ಪಾಪಕರನಾಬ್ಧಿಪತಿತನ ಪ.
ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ
ನಿರ್ಮಲಚಿತ್ತದಿ ನಿನ್ನ ಪೂಜಿಸದೆ
ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ
ಧರ್ಮಮಾರ್ಗವ ದೂರದಲಿ ತ್ಯಜಿಸಿ
ನಿರ್ಮಲಾಂತ:ಕರಣ ನಿಜಕುಲ
ಧರ್ಮರತ ಸಜ್ಜನರ ದೂಷಿಸಿ
ದುರ್ಮದಾಂಧರ ಸೇರಿ ಕೂಪದ
ಕೂರ್ಮನಂದದಿ ಬರಿದೆ ಗರ್ವಿಪೆ 1
ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ
ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ
ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ
ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ
ಇತ್ತ ದೊರೆಯನು ಮರೆತು ಇಂದ್ರಿಯ
ವೃತ್ತಿಗಳ ಸ್ವೈರಿಣಿಯ ದರುಶನ
ಭುಕ್ತಿ ಚುಂಬನ ಧ್ಯಾನ ದುಷ್ಟ
ಕಥಾ ಶ್ರವಣಸಲ್ಲಾಪಕಿತ್ತೆನು 2
ಪತಿತ ಪಾವನ ನೀನು ಪತಿತಾಗ್ರೇಸರ ನಾನು
ಅತಿಶಯಿತನು ನೀನು ಅತಿನೀಚನು ನಾನು
ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ
ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ
ಪಶುಪತಿ ಸುರೇಶ ಪ್ರ-
ಭೃತಿ ದಿವಿಜಗಣ ಸುತ ಪದಾಂಬುಜ
ಕ್ಷಿತಿಜಲಾಗ್ನಿ ಮರುನ್ನಭೋಹಂ
ಕೃತಿ ಮಹ ಸುಖತತಿನಿಯಮಕ 3
ಕರಿರಾಜ ಧ್ರುವಾಕ್ರೂರನರ ವಿಭೀಷಣ
ನಾರದರು ಮೊದಲಾಗಿ ನಿನ್ನನುದಿನವು
ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು
ಪರಿಪಾಲಿಸಿದನೆಂಬೊ ಗರುವದಿಂದ
ನಿರುಪಮಾನಂದೈಕ ಸದ್ಗುಣ
ಭರಿತರೆಂಬುದ ಹೆಮ್ಮೆಯಿಂದಲಿ
ಮರೆತರೆನ್ನನು ಪರಮಕರುಣಾ
ಶರಧಿಯೆಂದ್ಹೆಸರಿರುವುದೇತಕೆ 4
ನಾ ನಿನ್ನ ಮರೆತರು ನೀ ಎನ್ನ ಮರೆದರೆ
ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ
ದಾನವಾಂತಕ ಅಕಿಂಚನಾರೆ ಎಂಬ
ಪ್ರಮಾಣ ಉನ್ನತ ವಚನವಾಗದೆ
ಮಾನನಿಧಿ ಪವಮಾನ ತತ್ವಮತ
ಮಾನಿಜನ ಸಂಸ್ತುತ ಪದಾಂಬುಜ
ಶ್ರೀನಿವಾಸ ಕೃಪಾನಿಧೆ ಕಮಲಾ
ನಿಲಯ ವೆಂಕಟನಿಜಾಲಯ 5
ವೇದವನು ತಂದು ಭೂಧರನ ಬೆನ್ನಲಿ ನೆಗಹಿ
ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ
ಮೇದಿನಿಯನಳೆದಿ ಕಾರ್ತದಶಾಸ್ಯ ಕಂ
ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ
ಪತಿತ ಪಾವನನೆಂಬ ಪರಮ ಬಿರುದನು ವಹಿಸಿ
ಜತನ ಮಾಡುವಿ ಭಕ್ತತತಿಗಳನು ಬಿಡದೆ
ಪತಿತ ಶೇಖರನನ್ಯಗತಿಯಾಗಿರುವ ಎನಗೆ
ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6
ನಾರದಕ್ರೂರ ನರ ಹೈರಣ್ಯಕಾದಿಗಳು
ಪಾದ ನೀರರುಹಗಳನು
ಘೋರತರ ಸಂಸಾರಪಾರವಾರವ ದಾಟಿ
ಧೀರರೆನಿಸಿದರೆಲ್ಲಪಾರಸನ್ಮಹಿಮ
ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ
ಗರಳ ಭಯವ್ಯಾಕೆ
ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ-
ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7