(ಶ್ರೀ ಸುಜ್ಞಾನೇಂದ್ರ ಪ್ರಾರ್ಥನೆ)
ಪಾದ ಸ್ಮøತಿಯಿಂದಾಯ್ತೆನಗಾನಂದ
ಅತಿಶಯ ತೋರಿಲ್ಲಿಗೆ ಬಂದ ಪ.
ಮೂರ್ತಿಯನು
ಕೀರ್ತಿಯನು
ತಾ ಕರುಣಿಸಿಹನು
ಕ್ಷಮಿಸುವನಖಿಳಪರಾಧವನು 1
ಗೆಲುವನು ವಾದಿಗಳ
ಸ್ತೋತ್ರಗಳ
ಸಾದರದಲಿ ತಾ ಮಾಡುತ ನಶ್ವರ ಬೋಧರ ಶಾಸ್ತ್ರದ ಕರ್ಮಗಳ
ಪಾದಾನತರಿಗೆ ಪರಮಕರುಣದಿಂದೋದಿಸಿ ತಿಳಿಸುವ ಧರ್ಮಗಳ 2
ಅಜಭವನುತ ದಿಗ್ವಿಜಯ ರಾಘವನ ಪದಪಂಕಜ ಭೃಂಗಾಯತನ
ಭಜಿಸಿರೊ ಭಕ್ತಜನಾರ್ದನನ
ನಿಜ ಜನರಿಗೆ ಸುರಕಲ್ಪತರುವೋಲಿದಿರಲಿ ತೋರ್ಪ ಶುಭಾಕೃತನ
ಸದ್ವಿಜಜನ ಮಂಡಲಮಂಡಿತನ 3