ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಮಣಿ ದಯದೋರು ಬ್ರಹ್ಮ ಸಮೀರಜನ ನೀ ಬೇಗ ಮೂರುತಾಪದ ದೂರಗೈಸಿ ಸರೋರುಹಾಕ್ಷನ ಸಾರಗೈಸುತ ಪ. ಶ್ರೀನಿವಾಸನ ಸರ್ವಸೇವೆಯ ತಾನೆ ಮಾಳ್ಪೆನೆಂದು ಭಾನುಕೋಟಿ ಸಮಾನಭಾಸ ವಿಮಾನವಾಗಿ ನಿಂದು ಮಹಾನಭೀಯ ಸಮಸ್ತ ವಸ್ತು ವಿ- ಧಾನರೂಪಿಣಿಯಾಗಿ ಭಕ್ತಜನಾನುವರ್ತಿಯ ಭಾವ ಗ್ರಹಿಸಿದ 1 ಹಾರಕಟಕ ಕಿರೀಟವರ ಕೇಯೂರ ಬಾಹುಪುರಿಯು ಚಾರುತರ ಗಂಭೀರರವ ಶೃಂಗಾರದ ನೂಪುರವ ಮಾರನೈಯ್ಯನ ಮುದ್ದು ಹಸ್ತದಿ ವಾನೈಜಾರಿಗದಾಬ್ಜರೂಪದಿ ಸೇರಿ ಶೋಭಿಪ ಶಕ್ತಿ ನಿನ್ನ ಪದಾರವಿಂದವ ನಂಬಿ ನಮಿಪೆನು 2 ಕುಂದ ನೋಡದಿಂದೂ ಹರಿ ಚಂದನಾತ್ಮಕ ವೆಂಕಟೇಶನು ಬಂದಿಲ್ಲಿಹನೆಂದು ಮುನಿಜನವೆಂದ ಮಹಿಮೆಯ ನಿಂದು ತೋರುತ ಸನ್ನಿಹಿತಳಾಗೆಂದು ಚರಣದ್ವಂದ್ವ ಪೊಗಳುವೆ 3 ,
--------------
ತುಪಾಕಿ ವೆಂಕಟರಮಣಾಚಾರ್ಯ