ಬೇಡಿದವರಿಗೆ ದೊರೆವುದೇನೆಲೊ ಸಜ್ಜನರ ಸಂಗ
ಬೇಡಿದವರಿಗೆ ದೊರೆವುದೇನೆಲೊ ಪ
ಬೇಡಿದವರಿಗೆ ದೊರೆವುದೇನೆಲೊ
ಗಾಢಮಹಿಮನ ಭಕ್ತರಾವಾಸ
ಸುಕೃತ ಫಲವು
ಕೂಡಿಬಂದ ಕೋವಿದರಿಗಲ್ಲದೆ ಅ.ಪ
ದೃಢಕರಡಿಯಿಟ್ಟ ಭುವನವೆ ಕ್ಷೇತ್ರ
ದೃಢಕ ಜನರಡಿಯೇ ಸುಯಾತ್ರಾ
ಸಿದ್ಧ್ದಾಂತ ಮಾತಿದು
ದೃಢಕರಾಡಿದ ಮಾತೆ ನಿಜಮಂತ್ರ
ಇದೆ ಮೂಲಶಾಸ್ತ್ರ
ದೃಢಕರು ನಿಂತ ಸ್ಥಳವೆ ಬದರಿ
ದೃಢಕರು ಕೂತಸ್ಥಾನ ಮಧುರೆ
ದೃಢಕರೊಟನಾಟ ಲಭ್ಯವೆಂದರೆ
ಪಡೆದ ಪುಣ್ಯ ಮಹಭಾಗ್ಯಗಲ್ಲದೆ 1
ಭಕ್ತ ಜನಮಿಂದದೆ ತೀರ್ಥವು
ನಿಖಿಲರರಿವುದೆ
ಭಕ್ತ ಜನರುಂಡಸ್ಥಳ ಸಿರಿಯಾವಾಸವು
ದೊರೆಯದಾರಿಗೆ
ಭಕ್ತ ದರ್ಶನ ಪರಮ ಮಂಗಲವೋ
ಶುಭಕೆ ಶುಭಕರವು
ಭಕ್ತಜನರಿಹ್ಯ ಸಭೆಯೆ ಹರಿಸಭೆ
ಭಕ್ತರೊಪ್ಪಿಗೆ ಹರಿಯ ಒಪ್ಪಿಗೆ
ಮೃತ್ಯುದೂರ ಮಾಳ್ಪ ಸರ್ವೋತ್ತಮನ
ಭಕ್ತರ ಪ್ರೇಮದೊಲುಮೆ 2
ದಾಸರ್ವಾಸವೆ ಕಾಶಿಕೇಂದ್ರವು
ಸತ್ಯ ಸತ್ಯವಿದು
ದಾಸರಿರುವುದೆ ಪರಮ ವೈಕುಂಠವು
ಮತ್ರ್ಯರರಿವುದೆ
ದಾಸಗಿತ್ತದ್ದು ಹರಿಗೆ ಅರ್ಪಣವು
ಪರಮ ಸುಖಕರವು
ದಾಸರೊರ್ಣವು ತೀರದಾರಿಗೆ
ಶ್ರೀಶ ಶ್ರೀರಾಮನಡಿಯಕಮಲ
ದಾಸರಿಜನರಡಿ ಪಿಡಿದು ಸುಸಹ
ವಾಸದಿರುವುದೆ ಮುಕ್ತಿಸಂಪದ3