ನೀನೆ ಗತಿ ಎನಗಿನ್ನು ಕರುಣಿಸು ಮಾಧವ
ದೀನನ ಮರೆಯದಿರು ಸಿರಿಯರ ಜೀವ ಪ
ನೀನೆ ಕರುಣಾಳು ಭಕ್ತಜನರಭಿಮಾನಿ
ನೀನೆನ್ನ ಬಿಟ್ಟ ಬಳಿಕ ಕಾಮಿತವ ಪೂರೈಸಿ
ಕಾಯ್ವರಕಾಣೆನಾರನು ಕಮಲನಾಭ ಅ.ಪ
ಎಡಬಿಡದೆನ್ನನು ಕಾಡುತಿರುವ ಅತಿ
ಜಡಭವ ಕಡುದು:ಖ ತಡಿಲಾರೆನಭವ
ಅಡರಿಕೊಂಡೆನ್ನ ಸುಡುತಲಿರುವ
ಒಡಲತಾಪ ಗಡನೆ ಬಿಡಿಸಿ
ಬಿಡದೆ ಎನ್ನನು ಪಿಡಿದು ರಕ್ಷಿಸು
ಮಡದಿಗಕ್ಷಯದುಡುಪು ಇತ್ತನೆ 1
ಶರಧಿಸಂಸಾರದ ಉರುತರ ಪರಿಬಾಧೆ
ಕಿರಿಕಿರಿ ಪರಿಹರಿಸಿ ಪೊರೆಯಯ್ಯ ಜವದಿ
ಶರಣುಮಾಡುವೆ ಶರಣಜನರ
ಕರುಣಮಂದಿರ ಮರೆಯದಿರೆಲೊ
ತರಳ ನಿರುತದಿ ಚರಣಸ್ಮರಿಸಿ
ಕರೆಯೆ ಕಂಬದಿ ಭರದಿ ಬಂದನೆ 2
ಮುಂದೆನಗೆ ಭವಬಂಧ ಎಂ
ದೆಂದಿಗಿಲ್ಲದಂತೆ ತಂದೆ ಕರುಣಿಸು ದಯಾ
ಸಿಂಧು ಶ್ರೀರಾಮ ವಂದಿ ಭಜಿಸುವೆ
ಮಂದರಾದ್ರಿ ಮಂದಿರನೆ ತ್ವರ
ಬಂದು ಕಾಯೊ ಬಂಧನದಿ ಜಗ
ತಂದೆ ನಿಮ್ಮ ಪಾದಕೆಂದು ಪೂವಗೆ (?) ಬಂದು ಪೊರೆದನೆ 3