ಕಂದ ಭೀಮಗೆ ಸರಿಯಿಲ್ಲ
ಎಂದೆಂದಿಗೆ ಬಿಡದೆ ಬಂದಾ ಪ್ರತಿಬಂಧಕಗಳ
ನಿತ್ಯ ಅರಿತುಳಿವಾ ಸತ್ಕೀರ್ತಿ ಪೊಳವ ಪ
ಪ್ರಳಯಾಂತದಲ್ಲಿ ತಾನು ತಿಳಿದು ಸತ್ವ ಜೀವರ ನೆಲೆ
ಗೊಳಿಸುವೆನೆಂದು ಬಲುಹರುಷದಲಿ
ಜಲಜನಾಭನ ಚರಣಾಬ್ಜಕರಿಗೆ ಹಸ್ತ ಮುಗಿದು
ಶ್ರುತಿವಿನುತ ಇದೇ ಕಾಯವನಿತ್ತ 1
ಮಂಡೆ ಮೇಲೆ ಭಾರವ
ಕೊಂಡಾ ಸಹಸ್ರ ಫಣ ಕುಂಡಲಿಯ ಪೊತ್ತಾ
ಗಂಡುಗಲಿ ಕೂರ್ಮನಾ ಕೊಂಡಾಡಲು ನಮಗೆ
ಸಗುಣಾಖ್ಯಾ ಗುರುವೀತನೇ ಮುಖ್ಯಾ 2
ಭೀಮನೆ ಭೀಮಸೇನಾ ಭೀಮರಾಯನೆಂದು ನೇಮದಿಂದಲಿ
ನಾಮವ ನೆನೆದಡೆ ಪಾಮರ ಬುಧ್ಧಿಯನ್ನು
ನಿತ್ಯ ಸತ್ಪುಣ್ಯ
ಅನುಗಣ್ಯ ಬಲು ಗುಣ್ಯಮಾಡಿಸುವನನ್ಯ 3
ಹಿಂದೆ ರಘುನಾಥನ ಛಂದದ ದೂತನಾಗಿ
ಇಂದು ವಂಶದಲಿಂದು
ಮಂದಹಾಸದಲುದಿಸಿ ನಂದದಿಂದಲಿ ಕುರುಬಲವ
ಗೆದ್ದ ಚಲುವ ಭಕ್ತಗೊಲಿವ ಮೂಲೋಕವ ಗೆಲುವ 4
ಜ್ಞಾನ ಭಕ್ತಿ ವೈರಾಗ್ಯ ನಾನಾ ಪ್ರಕಾರ ಭೀಷ್ಟೆ
ಮಾಣದೆ ಕೊಡುವನು ಅನಂತ ಕಾಲಕೂ ಆನಂದತೀರ್ಥನೀತಾ
ಪ್ರಾಣಾದಿ ಪಂಚರೂಪ ಶ್ರೀನಾಥ ವಿಜಯ ವಿಠ್ಠಲಾ ಸಿರಿನಲ್ಲಾ ಪೊರೆವೆಲ್ಲಾ ಒಂದೆಂಬದಲ್ಲಾ 5