ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ ಬಡವರ ಬಂಧು ಬಹುಕೃಪಾಸಿಂಧು ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ. ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ ಅತಿಪಾತಕಿ ಅಜಾಮಿಳನ ಉದ್ಧರಿಸಿದೆ ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ 1 ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ ಬಳಲಿಸಬ್ಯಾಡವೊ ಭಕ್ತಕುಟುಂಬಿ ನಳಿನದಳಾಂಬಕ ನೀ ಸಲಹೆನ್ನನು 2 ಹೇರೊಪ್ಪಿಸಿದ ಮೇಲ್ಯಾತರ ಸುಂಕವು ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ 3
--------------
ಹೆಳವನಕಟ್ಟೆ ಗಿರಿಯಮ್ಮ
ನಂಬಿದವರಿಗೆ ಇಂಬುದೋರುವ |ಲಂಬೋದರ ಗಣನಾಯಕ ಪಶಂಭು ಶಂಕರಸುತನೆ ಭಕ್ತಕುಟುಂಬಿ ವಿಘ್ನನಾಯಕ ಅ.ಪಏಕದಂತ ವಿವೇಕದಾತನೆ | ಲೋಕನಾಥ ಪ್ರಖ್ಯಾತನೆಶೋಕಹರಹೇರಂಬಗಜಮುಖಕಾಕುಜನಸಂಹಾರಕನೆ ಜಯತು ಜಯತು 1ಕುಂಕುಮಾಂಕಿತ ದೇವದೇವನೆ | ಕಿಂಕರನ ನುತಿಪಾತ್ರನೆಶಂಕರಿಯ ಸುಕುಮಾರ ಮಧುಪುರಪಂಕಜಾದಳನೇತ್ರನೆ ಜಯತು ಜಯತು 2ವಿಘ್ನಘನಕಾಂತಾರಕ ನಲನೆ | ವಿಘ್ನ ಮೇಘಕೆ ಅನಿಲನೆವಿಘ್ನಕರ ಯಾಮಿನಿಗೆಭಾಸ್ಕರವಿಘ್ನಸಾಮಜಕೇಸರಿಜಯತು ಜಯತು 3ಗಂಧಚಂದನ ಪುಷ್ಪಫಲಗ | ಳಿಂದ ನಿನ್ನನು ಪೂಜಿಸಿವಂದಿಸುವೆ ನಿನ್ನಂಘ್ರಿ ಕಮಲಕೆ ಸಲಹೊಸಲಹೊ ಗೋವಿಂದದಾಸನ ಜಯತು ಜಯತು 4
--------------
ಗೋವಿಂದದಾಸ
ಮಂದಗಮನೆ, ಇವನಾರೆ ಪೇಳಮ್ಮ |ಮಂದರಧರಗೋವಿಂದ ಕಾಣಮ್ಮಪಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
--------------
ಪುರಂದರದಾಸರು