ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವಿ ತನಯಗೆ ಮಂಗಳಂ ಶುಭ ಮಂಗಳಂ ಯುಗ ಯುಗದಿ ಪುಟ್ಟಿ | ಜಿಗಿದು ಗಗವ ಮೆಟ್ಟಿ ಹಗಲೊಡೆಯನ ಫಲ ಬಗೆಯ ಬಕ್ಷಿಸಿ ಮಿಗೆ ಭಕುತಿಲಿಂದ ರಘುಪನೊಲಿಸಿನಾ ಲ್ಮೊಗನ ಪದವಿ ಪಡೆದ ಸುಗುಣ ನಿಧಿಗೆ 1 ಪುನಃ ದ್ವಾಪರದಲ್ಲಿ ಇನಜನ ತನುಜಗೆ ಅನುಜನೆಂದೆನಿಸಿ ಹರಿಯಾಜ್ಞೆಯಿಂದಲಿ ಮಣಿಮಂತ ಮೊದಲಾದ ದನುಜರ ಗಣವೆಲ್ಲ ರಣದೊಳು ಹಣಿದಂಧ ಘವವೀರನೆ 2 ಬಂದು ಭೂಮಿಯಲ್ಲಿ ಮಧ್ಯಮಂದಿರ ನಂದನನಾಗಿ ಮಂದ ಮಾಯ್ಗಳ ಮತ ಖಂಡಿಸುತಲಿ ಶಿಂಧುತೀರದಿ ಮೆರೆವ ಇಂದುಕ್ಷೇತ್ರದಿ ಶಾಮ ಸುಂದರ ಸ್ಥಾಪಿಸಿದಾನಂದಮುನಿಗೆ 3
--------------
ಶಾಮಸುಂದರ ವಿಠಲ
ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು