ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಪ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ 1 ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ 2 ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಸಿರಿ ವಿಜಯವಿಠ್ಠಲ ತಿರುಮಲೇಶಾ 3
--------------
ವಿಜಯದಾಸ
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | 1 ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ 2 ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಭಜಿಸಿರಯ್ಯಾ | ಅಯ್ಯಯ್ಯಾ 3 ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ4 ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | 5 ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಹರಿನಾಮ ದಂಡವಾ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |6 ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ಕುಹಕ ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ 7 ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಉರಗ ಉಪವಾಸ ತಂತ್ರ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಪಾದವ ನಂಬಿರೈಯ್ಯ | ಅಯ್ಯಯ್ಯಾ 8 ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಸಿರಿ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ 9
--------------
ವಿಜಯದಾಸ
ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆಯಲಗುರದ ಹನುಮಂತ ಗೆಲಿಸು ಭವಪಂಥ ಪ.ಮೂಜಗದೊಳಾರು ನಿನಗೆಣೆಯೆ ಋಜುಗಣಪತಿ ಸರೋಜಭವಪದ ಗಮ್ಯ ರಮ್ಯಭೂಜಾತೆಯಳಶೋಕಬಿಡಿಸಿದ ಬಲಾಧಿಕ ಬಿಡೌಜಾರಿಪಿತ ಹೃದಯನೊದೆದೆ 1ಲಾಕ್ಷಾಗೃಹದಿ ಧರ್ಮಜರ ಹೊರೆದು ಕಿಮ್ರ್ಮೀರರಾಕ್ಷಸ ಹಿಡಿಂಬರನು ತರಿದೆಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾಮ್ರಾಕ್ಷ ಭಾಗವತಜನಪಕ್ಷ 2ಉನ್ಮತ್ತಮತಂಗಳನು ಅಳಿದೆ ಯತಿರೂಪದಿ ಜಗನ್ಮಯನ ಭಕುತಿರಸ ಜಗದಿನಿನ್ನ ಬಂಟರಿಗೆರೆದೆನಿರಯತಪ್ಪಿಸಿದೆ ಪ್ರಸನ್ನವೆಂಕಟನಾಥ ಪ್ರೀತ 3
--------------
ಪ್ರಸನ್ನವೆಂಕಟದಾಸರು