ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ಮುತ್ತೈದೆಯಾಗಿರಬೇಕು ಮುದದಿಂದಲಿ |ಹತ್ತುನೂರು ನಾಮದೊಡೆಯಹರಿನಮ್ಮ ಪತಿಯೆಂದುಪ.ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ |ವರವೈರಾಗ್ಯವೆಂಬ ಒಪ್ಪುವ ಮೂಗುತಿ ||ತಾರತಮ್ಯದರಿಮೆ ತಾಯಿತಿ ಮುತ್ತುಸರ |ಕರುಣರಸಗಳೆಉಳ್ಳಕಟ್ಟಾಣಿಕಟ್ಟಿಕೊಂಡು1ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ |ನಿರುತ ಸತ್ಕರ್ಮವೇ ನಿಜಕಾಂತಿಯು ||ಪರಮ ಭಕ್ತರ ಪಾದರಜ ಹರಳು ಬಂಗಾರ |ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ 2ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು |ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ||ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ |ಧೃಡ ಭಕ್ತಿಯೆಂಬಂಥ ಕಡಗ - ಬಳೆ ಇಟ್ಟುಕೊಂಡು 3
--------------
ಪುರಂದರದಾಸರು
ಹರಿಯ ಚರಣವೆಂಬ ಸುರಧೇನವನುಗುರುಬೋಧೆಯೆಂಬ ಕಣ್ಣಿಯಲಿ ಕಟ್ಟಿರಯ್ಯಪ.ಭಕುತಿಯೆಂಬ ಕರುವನೆ ಬಿಟ್ಟು ನಿರುತ ವಿರಕುತಿಯೆಂಬ ಚೆನ್ನದಳಿಯ ಹಾಕಿ ||ಯುಕುತವಾದ ನಿತ್ಯಕಾಯ ಚರಿಗೆಯೊಳುಮುಕುತಿನಾಮಾಮೃತ ಕರೆದುಕೊಳ್ಳಿರಯ್ಯ 1ಕಾಮ ಕ್ರೋಧ ಲೋಭ, ಮೋಹ ಮದ ಮತ್ಸರಗಳೆಂಬಹಮ್ಮೆಂಬ ಕುರುಳನೆ ತಾಳಿ ಹಾಕಿ ||ತಾಮಸ ಜ್ಞಾನಾಗ್ನಿ ಪುಟಗೈದು ಇಂದ್ರಿಯನೇಮದ ನೀರ ಬೆರಸಿ ಕಾಯಲಿಡರೊ 2ಶಾಂತಗುಣವೆಂಬ ಹದನರಿತು ಆರಿಸಿ ಮತ್ತೆಭ್ರಾಂತಮನ ಮಜ್ಜಿಗೆಯ ಹೆಪ್ಪನಿಕ್ಕಿ ||ಕಾಂತವಿಷ್ಣು ಮಾಯಾಮಂಥದಿ ಶೋಧಿಸಿ ಸಿ -ದ್ಧಾಂತವೆಂಬ ಕಡೆಗೋಲ ನೇಣನೆ ಪಿಡಿದು 3ಪರಬೊಮ್ಮನೆನಿಪ ಬೆಣ್ಣೆಯ ಮುದ್ದಿಯನೆ ತೆಗೆದುಶರಣಮಣಿಯೆಂಬ ತುಪ್ಪವನೆ ಕಾಯಿಸಿ ||ಮರಣವೆಂಬ ನೊರೆ ತೆಗೆದೊಗೆದು ಅಮೃತವನಿರುತ ಹೃದಯವೆಂಬ ಕೊಡವನೆ ತುಂಬಿರೊ 4ಅನವರತ ಹರಿಸ್ಮರಣೆಯೆಂಬ ಬೀಸೂರಿಗೆಅನುವಾಗಿ ಕುಳಿತುಂಡು ಸುಖದಿ ತೇಗಿ ||ಚಿನುಮಯ ಚಿದಾನಂದ ಪುರಂದರವಿಠಲನಅನುದಿನ ನೆನೆ ನೆನೆದು ಸುಖಿಯಾಗಿರಯ್ಯ 5
--------------
ಪುರಂದರದಾಸರು