ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದತೀರ್ಥ ವಂದ್ಯ ಪಾಲಿಪುದು ಸು- ಜ್ಞಾನ ಭಕುತಿಯಾನಂದ ಸಾನುರಾಗದಿ ಕಾಯೊ ಸನಕಾದಿ ಮುನಿವಂದ್ಯ ಪ. ಅಖಿಳ ವೇದವಿದಿತ ದಾಸೀಕೃತ ವಿಖನಸಗಣವಿನುತ ನಿಖಿಳ ದೋಷದೂರ ಸಕಲ ಸದ್ಗುಣಪೂರ ಪ್ರಕಟನಾಗೀಗೆನ್ನಿದಿರಿನಲಿ ಸುರನಿಕರನಂದನ ನೀರದಪ್ರಭ 1 ಮಾರನಂದನ ನಿನ್ನಯ ಲೀಲಾಮೃತವಾರುಧಿಯೊಳಗಿಳಿದು ಶ್ರೀರಮಣಿಯು ಇನ್ನು ಪಾರಗಾಣದೆ ತತ್ವ- ಸಾರ ನಿನ್ನುರವನು ಸೇರಿಕೊಂಡಿಹಳು ಕ್ರೂರ ಕರ್ಮಾಚರಣ ತತ್ವವಿಚಾರಗಂಧ ವಿದೂರವಾಗಿಹ ಹಾರಕೂಪದಿ ಮುಳುಗಿರುವನ ಕರಾರವಿಂದದಿ ಪಿಡಿದು ರಕ್ಷಿಸು 2 ವೇದ ಸ್ಮøತ್ಯುಕ್ತವಾದ ಕರ್ಮಗಳೆಂಬೊ ಹಾದಿಯನರಿಯೆ ಇನ್ನು ಈ ಧರೆಯೊಳಗಿಹ ತೀರ್ಥಕ್ಷೇತ್ರಯಾತ್ರೆ- ಯಾದರು ಮಾಡದಿನ್ನು ಎನ್ನನು ಶ್ರೀಧರ ಕರಕಮಲ ಪೂಜಿತಪಾದ ನಿನಗೊಪ್ಪಿಸಿದೆ ದೈನ್ಯದಿ ಕಾದುಕೊಂಬುವ ನೀನೆ ಕರುಣಾಂಬೋಧಿ ಶೇಷಧರಾಧಿರೇಶನ 3
--------------
ತುಪಾಕಿ ವೆಂಕಟರಮಣಾಚಾರ್ಯ