ಭಕುತಿ ಸುಲಭವಲ್ಲ ಶ್ರೀ ಹರಿ ಭಕುತಿ ಸುಲಭವಲ್ಲ ಪ
ಮುಕುತಿಗೆ ಯುಕುತಿ ಬೇರೆಯಿಲ್ಲ ಶ್ರೀ ಹರಿ ಅ.ಪ
ಉರುತರ ಕ್ಲೇಶಕೆ ಗುರಿಯಾಗುತಿರಲು
ಹರಿ ಹರಿಯೆನ್ನುತ ಕಿರುಚುತ ಸತತವು
ಕ್ಲೇಶ ಹರಿಯನು ಸುಲಭದಿ
ಮರೆವುದು ಭಕುತಿಯ ತರವಾಗುವುದೇ 1
ಭುವಿಯಲಿ ಬಹು ವಿಧ ಸುವಿನೋದಗಳ
ಸವಿಯನು ಪೊಂದಲು ವಿವಿಧ ಭಾಗ್ಯಗಳ
ಸುವಿನಯದಲಿ ಮಾಧವನನು ಬೇಡಲು
ಹವನ ಹೋಮಗಳು ಭಕುತಿಯಾಗುವುದೇ 2
ಶ್ರವಣ ಮನನ ವಿಧಿಧ್ಯಾಸಗಳಿಂ ಸಿರಿಪತಿ
ಗುಣಗಣದಲಿ ದೃಢಮತಿಯನು ಮಾಡುತ
ತನುಮನಗಳನÀರ್ಪಣೆಯನು ಮಾಡುತ
ಮನಸಿಜ ಜನಕ ಪ್ರಸನ್ನನಾಗುವಂಥ 3