ಆನಂದತೀರ್ಥ ವಂದ್ಯ ಪಾಲಿಪುದು ಸು-
ಜ್ಞಾನ ಭಕುತಿಯಾನಂದ
ಸಾನುರಾಗದಿ ಕಾಯೊ ಸನಕಾದಿ ಮುನಿವಂದ್ಯ ಪ.
ಅಖಿಳ ವೇದವಿದಿತ ದಾಸೀಕೃತ ವಿಖನಸಗಣವಿನುತ
ನಿಖಿಳ ದೋಷದೂರ ಸಕಲ ಸದ್ಗುಣಪೂರ
ಪ್ರಕಟನಾಗೀಗೆನ್ನಿದಿರಿನಲಿ ಸುರನಿಕರನಂದನ ನೀರದಪ್ರಭ 1
ಮಾರನಂದನ ನಿನ್ನಯ ಲೀಲಾಮೃತವಾರುಧಿಯೊಳಗಿಳಿದು
ಶ್ರೀರಮಣಿಯು ಇನ್ನು ಪಾರಗಾಣದೆ ತತ್ವ-
ಸಾರ ನಿನ್ನುರವನು ಸೇರಿಕೊಂಡಿಹಳು
ಕ್ರೂರ ಕರ್ಮಾಚರಣ ತತ್ವವಿಚಾರಗಂಧ ವಿದೂರವಾಗಿಹ
ಹಾರಕೂಪದಿ ಮುಳುಗಿರುವನ ಕರಾರವಿಂದದಿ ಪಿಡಿದು ರಕ್ಷಿಸು 2
ವೇದ ಸ್ಮøತ್ಯುಕ್ತವಾದ ಕರ್ಮಗಳೆಂಬೊ ಹಾದಿಯನರಿಯೆ ಇನ್ನು
ಈ ಧರೆಯೊಳಗಿಹ ತೀರ್ಥಕ್ಷೇತ್ರಯಾತ್ರೆ-
ಯಾದರು ಮಾಡದಿನ್ನು ಎನ್ನನು
ಶ್ರೀಧರ ಕರಕಮಲ ಪೂಜಿತಪಾದ ನಿನಗೊಪ್ಪಿಸಿದೆ ದೈನ್ಯದಿ
ಕಾದುಕೊಂಬುವ ನೀನೆ ಕರುಣಾಂಬೋಧಿ ಶೇಷಧರಾಧಿರೇಶನ 3