ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಜಲಧಿತಕ್ಕದೊ ನಿನ್ನಳಿಯಗೂ ನಿನಗೂ |ಹಲವು ಬಗೆಯಿಂದಲಿ ಪರೀಕ್ಷಿಯನು ಮಾಡಿದರೆ ಪಮೊದಲೆ ತಿಳದಷ್ಟು ನಿನ್ನ ಮಹತ್ಮಿ ವರ್ಣಿಸುವೆ |ತುದಿಗಂಡು ಬಲ್ಲೆನೇ ಅಧಮ ನಾನೂ ||ಎದುರಿಗಂಬುವದಾಡಿಕೊಂಡ ಬಗೆ ಬ್ಯಾರೆಲ್ಲೀ |ಮುದದಿಂದ ದಯಮಾಡಿ ಕೇಳೊ ರತ್ನಾಕರನೇ 1ನಿನ್ನಿಂದ ಹುಟ್ಟಿಹುದು ವಿಷವು, ಗುರುವಿನ ಪತ್ನಿ |ಯನ್ನು ಸ್ವೀಕರಿಸಿದನು ನಿನ್ನ ಮಗನೂ ||ಘನ್ನತರ ಮಕರಾದಿಗಳು ನಿನ್ನ ಪರಿವಾರ |ಇನ್ನೆಷ್ಟು ಪೇಳಲಿ ಚರಿತ್ರ ಪಾರಾವಾರ 2ನಿನ ಒಡಲಿಗೆಷ್ಟಾದರನ್ನ ಸಾಕೆನಿಸದೂ |ದಣಿದು ಬಂದವರಿಗಾಶ್ರಯವು ಕಾಣೇ ||ಉಣಲಿಕ್ಕೆ ಅನ್ನೆಂಬದೆಂಟನೆ ರಸದಂತೆ |ಘನಖ್ಯಾತಿ ದೂರದಲಿ ಬಳಿಗೆ ಬರಲಿಂತಿಹದು 3ಪ್ರೀತಿಯಂ ಬಂದವರು, ಗ್ರಹಣ ವೈಧೃತಿ ವೇತೀ |ಪಾತದಲಿ ನಿನ ದರುಶನಾಗಬೇಕೂ ||ಭೂತ ಬಡದವರಂತೆ ನಿನ್ನ ಕಲ್ಲುಗಳಿಂದ |ಘಾತಿಸಲಿ ಬೇಕು ನೋಡಲ್ಕೆ ಬಹು ಸೋಜಿಗವು 4ತುಳಿದದಕೆ ಹಿಗ್ಗಿದಿಯೋ ಬಹುಮಾನಿ ನೀನೆಲವೊ |ಲಲನಿ ಹಡದೇಳು ಶಿಶುಗಳ ಕೊಂದಳೂ ||ಬಲುಭಂಟಹಿರಿಯಮಗಗರಸುತನ ಕೊಡಲಿಲ್ಲ |ಇಳಿಯೊಳಗೆ ನೀ ಮಾಡಿದನ್ನ್ಯಾಯಕೆಣಿಯುಂಟೆ 5ಸತಿಸಂಗ ಬಿಡಲೊಲ್ಲಿ ಪರ್ವಕಾಲಗಳಲ್ಲಿ |ಸುತಗೆ ಕಡಿಮೆದರಿಂದೆ ಆದಿ ಹ್ಯಾಗೊ ||ಪತಿವ್ರತಾ ಮಗಳಾದಳೊಂದೆ ಸುಗುಣದರಿಂದೆ |ಕ್ಷಿತಿಯೊಳನವರತ ಪೂಜಿಸಿಕೊಂಬಿ ಜನರಿಂದ 6ಜಾಮಾತನಿಗೆ ಇಹವು ಮುಖವು ಹತ್ತೊಂಬತ್ತು |ಆ ಮಧ್ಯ ಗಜಲಪನದಂತೆ ಒಂದೂ ||ಭೂಮಿಯೊಳಗಾಶ್ಚರ್ಯ ತಾನೆ ಮಕ್ಕಳ ಪಡೆವ |ಈ ಮಗಳು ಬಹುಸುಖವ ಬಡುವಳಿವನಿಂದಲ್ಲಿ 7ಬೆರಳು ಚೀಪುವನೋಡುಸುಳ್ಳಲ್ಲ ದಾನ |ಪುರುಷ ಬದುಕುವ ಚೋರತನದಿ ಜಾರಾ ||ತರುಣಿಯಾಗಿದ್ದ ನಿನ ಬಳಿಯಲ್ಲಿ ನೀ ಬಲ್ಲಿ |ತುರುಗಾಟವ ಕೊಡಲಿ ಕೊಂಡಡವಿಯೊಳಗಿರುವ 8ಗುರುಸ್ವಾಮಿ ಪಿತ ಬ್ರಹ್ಮ ವಂಶದ್ರೋಹಿಗಳವನ |ಪರಿವಾರ ಮಕ್ಕಳಿಗೆ ಮಾವನಾದಾ ||ಉರುಗ ಶಯನಂಡಜಾಧಿಪ ವಹನ ನೀಲಾಂಗ |ಅರಿತನೃಪಋಷಿಗಳೊಳಗೊಬ್ಬರಿಗ್ಯು ಮಗನಲ್ಲ 9ಕುಲಸೂತ್ರವಿಲ್ಲ ಒಂದೇ ರೂಪನಲ್ಲ ನಿ- |ಶ್ಚಲನಲ್ಲ ವತಿ ಕಠಿಣ ವಕ್ರವದನಾ ||ಬಲು ಕೋಪಿ ತಿರದುಂಬ ಸ್ತ್ರೀಯರಿಬ್ಬರ ಕೊಂದ |ಅಲವಜಾರನು, ಬತ್ತಲಿರುವ, ಕಲಹಕೆ ಪ್ರೀಯ 10ಕೊಟ್ಟೆಲ್ಲ ಅವನಿಗೀ ಕನ್ನಿಕಿಯ ಸವತಿಯರು |ಎಷ್ಟೋ ಮಲಸುತರಿಹರದಕೆ ದಶ ಮಡೀ ||ಸಿಟ್ಟಾಗ ಬ್ಯಾಡವನ ವಾರ್ತಿ ಕೇಳಲು ಜನರು |ಬಿಟ್ಟು ಸಂಸಾರವೆಂದಿಂದಿಗೊಲ್ಲದಿಹರೂ 11ನಿನ್ನ ಮಗಳವನಿತ್ತವನ ಮಗಳ ಮದಿವ್ಯಾದಿ |ಕನ್ಯ ವಿಕ್ರಯ ಪರಸ್ಪರವೆನಿಸಿತೂ ||ಇನ್ನೇಸೊ ನಿಮ್ಮ ನಿಮ್ಮಲ್ಲಿದ್ದ ನಡತಿಗಳು |ಅನ್ಯರಿದುಕೇಳಿಭಜಿಸರೊ ಶುದ್ಧ ಭಕುತಿಯಲೀ 12ಏನಾದರೇನು ಶ್ರೀ ಪ್ರಾಣೇಶ ವಿಠಲನಿಗೆ |ನೀನೆಗತಿನಿರ್ದೋಷ ವಸ್ತುವೆಂದೂ ||ಶ್ರೀನಳಿನಭವಮುಖರುನಿತ್ಯವಂದಿಸುತಿಹರೊ |ನೀನವನ ಮಾವನಾದಿನ್ನು ಪೂಜಿತನಲ್ಲೆ 13
--------------
ಪ್ರಾಣೇಶದಾಸರು