ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸದೃಶಮಹಿಮೆಯನು ಪ ಬಿಸಜಸಖ ಕಿರಣ ತರಂಗ ವಸುಧೀತಳದೊಳು ಇವರ ಸುಶಿತ ಸತ್ಕೀರ್ತಿಯ ಪಸರಿಸಿರುವುದು ಘನ್ನ ಅ.ಪ ಭಕುತಿಪೂರ್ವಕವಾಗಿ ಸತಲಕ್ಷೇತ್ರವ ಸಂಚರಿಸಿ | ನಿಖಿಲ ಭೂದೇವಗಣಕೆ | ವಿಖಿನಾರ್ಚಿನ ಮೂಲ ಲಕುಮೀಶ ದರುಶನದಿ | ಸುಖವಿತ್ತು ಪಾಲಿಸಿದ ಅಕಳಂಕಮಹಿಮ 1 ಭಯ ಭಕುತಿಯಲಿವರ ಸೇವಿಸುವ ನರರಿಗೆ ಆವಾವ ಭಯವಿಲ್ಲವೋ | ಗೋವತ್ಸನ್ಯಾಯದಲಿ ತಾವು ಬೆಂಬಲರಾಗಿ | ಭೂವರಜನದಿ ವಾಸರಿವರಿಗೆ ಜಯವ 2 ಈ ಯತಿಯೊಲುಮೆಯೇ ರಾಯರೋಲಿಮೆಯೋ ಕೇಳೋ ರಾಯರೊಲಿಯಲು ಗುರುವಾಯು ವಲಿವಾ | ವಾಯು ವಲಿದಾ ಮಾತ್ರದಿ | ಕಾಯಜ ಜನಕ ಯಮರಾಯನಂಬಿಸಿ ಬಿಡಿಸಿ ಕಾಯುವನು 3 ಸು ವಿನಲು ಸುಜ್ಞಾನ | ಶೀ ಎನಲು ಶೀಲತ್ವ | ಕಾಯ ಶುದ್ಧಿಯಲಿ ಇಂದ್ರಾ ಎಂದುಚ್ಚರಿಸಲಾ ಇಂದ್ರಲೋಕ ಸುಖವೊ ನಿಜವೋ 4 ವೃಂದಾರ ಕಾಂಶಜರು | ಸಂದೇಹ ವಿಲ್ಲಿವರ ವೃಂದಾ ಮಂದಾಕಿನಿಯೊಳಗೆ ಮಿಂದ ಫಲಸಂಪ್ರಾಪ್ತಿ ಇಂದಿರಾಪತಿ ಶಾಮಸುಂದರನ ಕರಪಿಡಿವ 5
--------------
ಶಾಮಸುಂದರ ವಿಠಲ