ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನೊರೆಗೆ ನಾ ತಿಳಿಯಲಾರೆ ಪ ಪನ್ನಗಾದ್ರಿವಾಸ ಶ್ರೀಹರೆ ಅ.ಪ. ಮಾನವ ನಾನು ಎನ್ನಿಂದ ಸಾಧ್ಯವಿರೆಇನ್ನೂ ಹೆಚ್ಚು ಹೆಚ್ಚು ಭಕುತಿಯನ್ನು ಬೇಡ ಬೇಡ 1 ಬೊಮ್ಮಾದಿ ದೇವತೆಗಳು ಅಮ್ಮ ಲಕುಮಿಯ ಸಹನಿಮ್ಮನ್ನು ತಿಳಿಯರಿನ್ನು ತಿಳಿವ ಹಮ್ಮು ನನಗೇಕೆ ಶೌರೇ 2 ಅನ್ಯಜೀವಿಯಂತರಂಗ ಎಂದೂ ತಿಳಿಯಲಾರೆ ನಾನುಇನ್ನು ಸರಸಿಜಾಮನೊಡಲ ನಿನ್ನ ತಿಳಿವುದೆಂತಹನೇ 3 ಇಷ್ಟೇ ಭಕುತಿಯಿಂದ ನೀನು ತುಷ್ಟನಾಗಿ ಸಲಹಬೇಕುಎಷ್ಟು ಕಷ್ಟಪಟ್ಟರೂ ನಿನ್ನಿಷ್ಟಕೆ ಸರಿ ಹೋಗುವದೆಷ್ಟು 4 ಭಕುತಿಯಲ್ಲಿ ಸತತವಿರಲು ಶಕುತಿಯನ್ನುನ್ನೀಯೊ ಎನಗೆಸಕಲ ಜಗದಿ ಮೆರೆವ ಗದುಗು ವೀರನಾರಾಯಣ5
--------------
ವೀರನಾರಾಯಣ
ಪವಮಾನ-ಪಾವನಮೂರ್ತಿಯು ನೀನು ಕಾವುದೆಮ್ಮನು ಪ ಭುವನ ಚತುರ್ದಶದಲ್ಲಿಹ ಜೀವರ ಜೀವನ ನಿನ್ನದೋ ದೇವವರೇಣ್ಯಅ.ಪ ತೃಣಜೀವರಾದಿ ಸರ್ವರೊಳು ನಿಂತು ಗುಣಕಾಲಕರ್ಮಕ್ಕನುಗುಣನಾಗಿಹ ಫಲವ ನೀನಿತ್ತು ಕ್ಷಣ ಬಿಡದೆಲೆ ನೀನಗಣಿತ ಕಾರ್ಯವ ದಣಿಯದೆ ಮಾಡಿಸಿ ಧಣಿಗರ್ಪಿಸುವಿಯೊ1 ಶ್ರೀ ಜಗದ್ಗುರುವರೇಣ್ಯನೆ ನೀನು ಋಜುಸಾರ್ವಭೌಮ ನಿಜ ಪಾದಾಂಬುಜವ ತೋರಿಸೊ ಇನ್ನು ಈ ಜಗ ಕಾರ್ಯ ನಿವ್ರ್ಯಾಜದಿ ಮಾಡುತ ನೀ ಜಯಾಪತಿಗರ್ಪಿಸಿ ಅಜಪದ ಪಡೆದೆಯೊ2 ಕೋಟಿತ್ರಯರೂಪನೆ ಕಾಯುವುದಯ್ಯ ದಾಟಿಸು ಭವಶರಧಿಯಾ ಪಾಟುಪಟ್ಟದ್ದೆಲ್ಲ ನೀನರಿಯಾ ಸಾಟಿಯುಂಟೆ ಲಲಾಟನೇತ್ರ ಬೆ ನ್ನಟ್ಟಿ ಬರಲು ಕೇದಾರಕೆ ಅಟ್ಟಿದೆ 3 ಮರಣ ಜನುಮಂಗಳು ಬಂದರೆ ಬರಲಿ ಹರಿಗುರುಗಳಲಿ ಸ್ಮರಣೆಯು ತಪ್ಪದೆ ನಿಶ್ಚಲವಿರಲಿ ಉರುತರ ಹರಿಸರ್ವೋತ್ತಮವೆಂಬುವ ತರತಮ ಭೇದವು ನಿರುತವು ಇರಲಿ 4 ಶ್ರವಣ ಮನನಾದಿ ಭಕುತಿಯನ್ನು ಪವಮಾನ ನೀ ಕೊಡು ಅನುಮಾನಿಸಬೇಡವೋ ನೀ ಇದಕ್ಕಿನ್ನು ಭವಮೋಚಕ ಶ್ರೀ ವೇಂಕಟೇಶ ಇನ್ನೊಳಹೊರಗಿಹನೆಂಬುವುದನು ತೋರೋ 5
--------------
ಉರಗಾದ್ರಿವಾಸವಿಠಲದಾಸರು
ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ ಪ ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯಅ.ಪ ಶ್ರವಣಮಾಡಲು ಭಕುತಿ ಆವಕಾಲಕು ಇತ್ತು ತವಪದದಾಸರ ದಾಸ್ಯ ಕೊಡಿಸೋ ದೇವ 1 ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ ಕೀರ್ತನ ಭಕುತಿಗೆ ಕರ್ತದಾತ ನೀನೆ2 ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ ಕರುಣಿಸಿ ಪೊರೆಯೊ ಗುರುವರ ಸುಂದರ 3 ಪಾದ ಸೇವೆಯ ಕೊಡು ಸಾದರದಿಂದಲಿ ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ 4 ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ 5 ವಂದನಾಭಕುತಿ ಎನ್ನಿಂದ ನೀ ಮಾಡಿಸಿ ನಂದನಂದನಗಾನಂದಪಡಿಸೊ ದೇವ 6 ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ ವಾಸುದೇವನ ನಿಜದಾಸನೆ ಸರ್ವದಾ 7 ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ 8 ಆತ್ಮನಿವೇದನ ಭಕುತಿಯನ್ನು ಪರ ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ 9 ನವವಿಧ ಭಕುತಿಯ ಕೊಟ್ಟು ಸಲಹೋ ದೇವ ಅವಕಾಲಕು ಪವಮಾನ ನೀನೆ ಗತಿ 10 ಸಂಕಟ ಹರಿಪ ಶ್ರೀ ವೇಂಕಟೇಶನ ದೂತ ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ11
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ
ಈ ದುರ್ಮಾರ್ಗಗಳನ್ನು ಪೀಡಿಸಬೇಡೈ |ಮಾಧವನೆ ಇಂದಲ್ಲ ಜನುಮ ಜನುಮದಲೀ ಪಮಾತಾ ಪಿತರರ ಆಜೆÕ ಮೀರಿ ನಡೆಯಿಸಬೇಡ |ಜಾತಿ ಧರ್ಮವ ಬಿಟ್ಟನೆನಿಸಬೇಡ ||ಈತುಚ್ಛವಿಷಯದಾಪೇಕ್ಷೆ ಮಾಡಿಸಬೇಡ |ಭೂತೇಶನೇ ಪರಮಾತ್ಮನೆನಿಸಬೇಡ 1ಹರಿದಿನದಲಿ ಬಿಂದುಉದಕಕುಡಿಯಿಸಬೇಡ |ಪರದ್ರವ್ಯದಲೀಷ್ಟ ಕೊಡಲು ಬೇಡ ||ನಿರುತ ಪರರಾ ನಿಂದಾವನ್ನು ಮಾಡಿಸಬೇಡ |ನರರ ಸೇವಿಸಿ ಬದುಕಿಸಲಿಬೇಡ 2ಸಣ್ಣ ಮಾನವರ ಸಂಗತಿಯ ಕೊಡಲಿಬೇಡ |ಅನ್ಯ ಶಾಸ್ತ್ರಗಳ ಕೇಳಿಸಲು ಬೇಡ ||ನಿನ್ನ ದಾಸಾನಾಮತವ ಬಿಟ್ಟು ಇರಿಸಬೇಡ |ಯನ್ನದೀ ಶರೀರಾದಿಯೆನಿಸಬೇಡ 3ಉತ್ತಮರ ಪೂಜೆಗೆಜಾಗುಮಾಡಿಸಬೇಡ |ವಿತ್ತವ ಸಜ್ಜನರಿಗೆ ಕೊಡಿಸಬೇಡ ||ನಿತ್ಯಸತ್ಕಥಾ ಶ್ರವಣವಿಲ್ಲದಲ್ಲಿಡಬೇಡ |ಸತ್ಯೇಶ ಯನ್ನ ಮಾತು ಮರೆಯಬೇಡ 4ಪ್ರಾಣೇಶ ವಿಠ್ಠಲ ನಿನ್ನನಲ್ಲದೆ ಎಂದೆಂದು |ಹೀನ ದೇವತೆಗಳಿಗೆ ಮಣಿಸಬೇಡ ||ಮಾನುಷ್ಯೋತ್ತಮಾದಿ ಬ್ರಹ್ಮಾಂತ ದಿವಿಜರಲ್ಲಿ |ನ್ಯೂನಭಕುತಿಯನ್ನು ಕೊಡಲಿಬೇಡ 5
--------------
ಪ್ರಾಣೇಶದಾಸರು
ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
--------------
ಪ್ರಾಣೇಶದಾಸರು