ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನೆ ಗತಿಯ ಬಯಸಿದರಾಹುದೇ | ಹಮ್ಮ ನೀಗಿ ಕ್ಷಿತಿಯೊಳು ವಮ್ಮನವಾಗಿ ನಿಲ್ಲದೇ ಪ ಭಕುತಿಯಂಕುರವಿಲ್ಲಾ ಯುಕುತಿ ಸಾಧನವಿಲ್ಲಾ | ಮುಖದಲಿ ಸ್ತುತಿ ಸ್ತವನಗಳಿಲ್ಲಾ | ಪ್ರಕಟದಿ ಶೋಡಷ | ಸುಕಲೆಯಾರ್ಚನೆಯಿಲ್ಲಾ | ಅಕಳಂಕ ದೇವ ನಂಬುಗೆ ದೃಢ ವಿಡಿಯಲಿಲ್ಲಾ 1 ವೇದ ಪುರಾಣವನು ಓದಿ ಕೇಳಿದರೇನು | ವಾದಗುಣದಿ ಹಿಂಗಲಿಲ್ಲಾ ತಾನು | ಸಾಧಿಸಿಕೊಳ್ಳದೇ | ಸಾಧುರ ಬೋಧವನು | ಗಾರ್ದಭ ಚಂದನ ಹೊತ್ತಂತೆ ಏನಾದರೇನು 2 ಗುರುಪಾದಕೆರಗದೆ | ಗುರುಮಾರ್ಗವರಿಯದೆ | ಮೊರೆವಾರು ಅರಿಮದವ ಮುರಿಯದೇ | ಪರವಸ್ತು ಇದೆಯೆಂದು | ನರಭಾವ ಮರೆಯದೆ | ಗುರುಮಹಿಪತಿ ಸುತ ಪ್ರಭು ಗುರುತ ದೋರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು