ಮುದ್ದುಕೃಷ್ಣ ವಿಠಲ | ಕಾಪಾಡೋ ಇವನ ಪ
ಅಧ್ವರೇಡ್ಯನೆ ದೇವ | ಬುದ್ಧಿ ಪ್ರದನಾಗೀ ಅ.ಪ.
ತರಳನಿವ ಭಕ್ತಿಯುತ | ಕರಪಿಡಿದು ಸಲಹಯ್ಯಮರುತಮತ ಪರಿಕರಪು | ತರತಮಸುತತ್ವಾಅ |ವರಪಂಚ ಭೇದಗಳ | ಅರಿಪಾಗುವಂತೆಸಗಿಪೊರೆಯೊ ಕರುಣಾಮಯನೆ | ಕರಿವರದ ದೇವಾ 1
ಪಾದ | ಭಕುತಿಭಾಗ್ಯಗಳಾ |ತೋಕನಿಗೆ ಒದಗಿಸುತ | ಬೇಕಾದ ವರವಿತ್ತುಮೊಕಳತ್ರನೆ ಸಲಹೊ | ಸಾಕಾರ ಮೂರ್ತೇ 2
ಹರಿಸೇವೆ ಗುರುಸೇವೆ | ಹಿರೆಜನಂಗಳ ಸೇವೆಸಾರುತಾ ಭಕುತಿಯಲಿಂದ | ಚರಿಪಮನವಿತ್ತೂವಸಸು ಸಾಧನಗೈಸಿ | ಪೊರೆಯ ಬೇಕೆಂದೆನುತಮರುತಾಂತರಾತ್ಮಕನೆ | ಕರಮುಗಿದು ಬೇಡ್ದೆ 3
ಕಾಮಾದಿಷಡ್ರಿಪು | ಸ್ತೋಮಗಳ ಕಾಟವನುನೇಮದಾ ಕಡೆಗೊತ್ತಿ | ಪಾಮರನು ಇವನಾಭೂಮಗುಣಿ ನೀನಾಗಿ | ಪ್ರೇಮದಿಂ ಸಲಹಲ್ಕೆನಾಮಾಳ್ಪೆ ಭಿನ್ನಪವ | ಶ್ಯಾಮಸುಂದರನೇ 4
ಗಾವಲ್ಗಣಿವರದ | ತಾವಕಗೆ ತವನಾಮಸೇವೆಯನೆ ಕರುಣಿಸುತ | ಕಾಪಾಡೊ ಹರಿಯೇ |ಗೋವುಗಳ ಪಾಲಗುರು | ಗೋವಿಂದ ವಿಠ್ಠಲನೆನೀವೊಲಿಯದಿನ್ನಿಲ್ಲ | ದೇವದೇವೇಶಾ 5