ಶಿವಕನ್ಯೇ ಗುಣರನ್ನೇ ಪ
ತವಪದ ಪದುಮವ | ಜವದಲೆ ತೋರಿಸುಅ.ಪ.
ಕಾಲಕೆ ಮಾನಿಯೆ | ಓಲೈಸುವೆ ಪದಕೀಲಾಲಜವನು | ಪಾಲಿಸು ಎನಗೇ 1
ಪವನ ಮತಾನುಗ | ರವನೆಂದೆನಿಪಗೆಭವ ಪರಿಹಾರಿಕ | ನವ ಭಕುತಿಪ್ರದೆ 2
ಮುಕುತಿಗೆ ಮಾರ್ಗವ | ಭಕುತಿಗೆ ಆಕರೆವ್ಯಕುತಿಯಗೈ ಹರಿ | ಭಕುತಿಗಳೆನ್ನಲಿ 3
ಸ್ತವ ಪ್ರಿಯ ನರಹರಿ | ಸ್ತವನವ ಗೈಯ್ಯುವಹವಣೆಯ ತೋರಿಸು | ಭವನಿಗೆ ಜನನಿಯೆ 4
ಗೋವ ಕಾವ ಗುರು | ಗೋವಿಂದ ವಿಠಲನಭಾವದಿ ತೋರಿಸು | ನೀ ಒಲಿದೆನಗೆ 5