ಇಂದಿರೆ ಮನೋಹರ ಭಕ್ತಲಲಾಮ
ಸಿಂಧುಸದನ ತ್ರಿಜಗದೋದ್ದಾಮ ಪ
ಮಂದರಮಂದಿರ ಮೇಘ ಶ್ಯಾಮ
ಕುಸುಮ ಅ.ಪ
ಅಮಿತ ಲೀಲ
ಸಗುಣನಿರ್ಗುಣ ಮಹಿಮಜಾಲ
ಸುಜನ ಪಾಲ
ಕಾಲ 1
ಪರತರಪಾವನ ಕರುಣಾಂತರಂಗ
ಮಾಧವ ಪರಿಭವ ಭಂಗ
ಸಿರಿ ನರಸಿಂಗ
ಮರಣರಹಿತ ಪ್ರಭುವರ ನೀಲಾಂಗ2
ಗೋಕುಲಪತಿ ಗೋಪಾಲಶೀಲ
ವ್ಯಾಕುಲಪರಿಹರ ವೇಣುಲೋಲ
ಕಾಕುದನುಜ ಸಂಹಾರ ವಿಶಾಲ
ಲೋಕಪಾವನೆ ವರ ದೇವಕಿ ಬಾಲ 3
ಯೋಗಿ ವಂದಿತ
ವನಜ ಸಂಭವಾದಿ ಸುರಮುನಿವಿನುತ
ಚಿನುಮಯ ಚಿದ್ರೂಪ ಚಿತ್ಕಳಾಭರಿತ
ಜನಕತನುಜೆಪತಿ ವಿಮಲಚರಿತ 4
ಗೋಕುಲನಾಯಕ ಶ್ರೀಕೃಷ್ಣನಮೋ
ವೈಕುಂಠನಾಯಕ ಶ್ರೀ ವಿಷ್ಣು ನಮೋ
ಲೋಕನಾಯಕ ಶ್ರೀನಿವಾಸ ನಮೋ
ಭಕುತಿದಾಯಕ ಶ್ರೀರಾಮ ನಮೋ5