ಒಟ್ಟು 6 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀನದಯಾಪರ ಜಾನಕೀನಾಥ ನೀನೆ ದಯಾರ್ಣವಅನಾಥಜನಾಪ್ತ ಪ ಘನತರ ಭವತಾಪವನು ಪರಿಹರಿಸೊ ಕನಿಕರಯುತ ನೀನೆ ಮನುಮುನಿವಿನುತ 1 ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ 2 ಭಕುತಾಭಿಮಾನಿ ನೀ ನಿಖಿಲಜಗಸೂತ್ರ ಭಕುತನ ಮೊರೆ ಕಾಯೊ ಭಕುತಾಭಿರಾಮ 3
--------------
ರಾಮದಾಸರು
ನೀನಿಲ್ಲದ ಜಗವಿನಿತಿಲ್ಲ ನೀನಲ್ಲದೆ ಎನಗಾರಿಲ್ಲ ಪ ನೀನೆ ನೀನೆಯಾಗಿ ಕಾಣಿಸಿ ಜಗ ಮಾಯಮಾಣಿಸುವಿ ನಿಜ ಸುಳ್ಳಲ್ಲ ಅ.ಪ ಹೊತ್ತುಗೊತ್ತು ಎಲ್ಲ ನಿನ್ನಿಂದೇ ನಿತ್ಯ ಅನಿತ್ಯವೆಲ್ಲ ನಿನ್ನಿಂದೇ ಸತುಚಿತುಚಿದ್ವಸ್ತು ತತ್ವಸರ್ವತ್ರಸೂತ್ರವೆಲ್ಲ ನಿನ್ನಿಂದೇ 1 ಸೃಷ್ಟಿ ಕ್ಷೇತ್ರ ತೀರ್ಥ ನಿನ್ನಿಂದೇ ಅಷ್ಟಸ ಭುವಗಳ್ನಿನ್ನಿಂದೇ ಹುಟ್ಟುಸಾವು ಎಲ್ಲ ಸ್ಪಷ್ಟದಿ ನೋಡಲು ಸೃಷ್ಟಿ ಪ್ರಳಯವಷ್ಟು ನಿನ್ನಿಂದೇ 2 ನಿಖಿಲ ವೇದ ನಿನ್ನಿಂದೇ ಅಖಿಲದೇವರೆಲ್ಲ ನಿನ್ನಿಂದೇ ಸಕಲಮಂತ್ರಮೂಲ ಭಕುತಾಭಿ ಶ್ರೀರಾಮ ಮುಕುತಿಸಂಪದ ಸಿದ್ಧಿ ನಿನ್ನಿಂದೇ 3
--------------
ರಾಮದಾಸರು
ಭಕುತಾಭಿಮಾನಿ ಸಕಲದೇವರ ಧಣಿ ನಿಖಿಲವ್ಯಾಪಕ ವಿಮಲ ಮುಕುತಿದಾಯಕನೆ ನೀ ಪ ವೇದವೇದಕ್ಕೆ ಸಿಲ್ಕದಾದಿಮೂರುತಿ ನಿನ್ನ ಪಾದಧ್ಯಾನದ ಶಕ್ತಿ ಸಾಧನಕೊಡು ಹರಿಯೆ 1 ಕಮಲಪೀಠಾದಿಸುರರು ಭ್ರಮಿಸುವ ತವಪಾದ ಕಮಲಕೃಪೆಯಿತ್ತೆನಗೆ ವಿಮಲಪತಿಯೆ ನೀಡೊ 2 ಭವಮಾಲೆ ಗೆಲಿಸೆನ್ನ ದಯದಿಂದ ಸಲಹಯ್ಯ ಭವರೋಗವೈದ್ಯನೆ ದಯಾಕರ ಶ್ರೀರಾಮ 3
--------------
ರಾಮದಾಸರು
ನಿನ್ನದೇ ಹಂಗೆನಗೆ ಶ್ರೀಹರಿನಿನ್ನದೇ ಹಂಗೆನಗೆ ಪನಿನ್ನದೇ ಹಂಗೆನಗುನ್ನತ ಸುಖವಿತ್ತುಮನ್ನಿಸಿ ದಯದಿಂದೆನನುದ್ಧರಿಸಯ್ಯ ಅ.ಪಜಿಹ್ವೆಗೆ ನಿಮ್ಮಯ ಧ್ಯಾನದ ಸವಿಸಾರವಿತ್ತಯ್ಯಾಭವಭವದಲ್ಲಿ ಪುಟ್ಟಿ ಜನಗೀಡೆನಿಸುವದಯದಿ ಪಿಡಿದು ಎನ್ನ ಭವಭಯಹರಿಸಿದಿ 1ವಿಸ್ತಾರ ತವಚರಿತ ಪಾಮರನ್ಹಸ್ತದಿಂ ಬರೆಸುತ್ತಅಸ್ತವ್ಯಸ್ತವೆಲ್ಲ ನಾಸ್ತಿ ಮಾಡಿ ನೀನೆಪುಸಿಯಾಗೆನ್ನಗೆ ಸ್ವಸ್ಥಪಾಲಿಸಿದಿ 2ಸದಮಲ ಶ್ರೀರಾಮ ಭಕುತಾಭಿ ಸದಮಲ ತವನಾಮಸುದಯದಿಂದೆನ್ನಯ ವದನದಿ ನಿಲ್ಲಿಸಿಸದಮಲವೆನಿಪ ಸಂಪದವಿಯ ನೀಡಿದಿ 3
--------------
ರಾಮದಾಸರು
ನೀನೆ ಭಕುತಾಭಿಮಾನಿ ಕರುಣಿ ಪಮರೆಬಿದ್ದ ಭಕುತರ ಪೊರೆಯಲು ತವಸಮಕರುಣಿ ದೇವರ ಕಾಣೆಧರೆಎರಡೇಳರೊಳ್1ಶಿಲೆಯನು ಪೆಣ್ಣೆನಿಸಿ ಕುಲದೊಳು ಕಲೆಸಿದಿಸಲಹಿದಿ ಗಜನ ಮಹ ವಿಲಸಿತಮಹಿಮ ಪ್ರಭು 2ಮೊರೆಯಿಟ್ಟು ಸ್ಮರಿಸುವ ಚರಣದಾಸನ ಆಸೆಕರುಣದಿಂ ಪೂರೈಸು ಪರತರ ಶ್ರೀರಾಮ 3
--------------
ರಾಮದಾಸರು