ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿತ್ರಾಹಿ ಮಂತ್ರಾಲಯನಿಲಯ ಪ ತ್ರಾಹಿತ್ರಾಹಿ ಮಂತ್ರಾಲಯ ಗುರುವೆ ಸೂತ್ರನಪಿತಕೃಪಾಪಾತ್ರ ನೀನಹುದೊ1 ಧ್ಯಾನ ಮೌನ ಸುಜ್ಞಾನವಿಲ್ಲದಿಹ ದೀನ ಜನರುದ್ಧಾರ ಗಂಭೀರ 2 ವಸುಧೆಯೊಳಗೆ ದಶಪ್ರಮತಿ ಸುಶಾಸ್ತ್ರವ ಪ್ರಸರಿಸಿ ತೋರಿದ ಅಸಮಮಹಿಮನೆ3 ಮೂಕ ಬಧಿರ ಅಂಧಾದಿಗಳ ಕುಂದುಗಳ ವ್ಯಾಕುಲ ಹರಿಪ ಕೃಪಾಕರ ಮೂರ್ತೇ 4 ಕರುಣಶರಧಿ ಸಿರಿರಮಣನ ಭಕುತಾಗ್ರಣಿ ಸುಗುಣಗಣಾಭರಣಕೆಣೆಯೆ 5 ಬೇಡಿದಿಷ್ಟವ ನೀಡಿ ಕಾಪಾಡುವೆ ಈಡುಗಾಣೆ ನಿನಗೀ ನಾಡೊಳು ಇನ್ನು 6 ಇಂದು ಮುಂದು ಎನ್ನ ಕುಂದುಗಳೆಣಿಸದೆ ಕಂದನೆಂದು ಎನ್ನ ಮುಂದಕೆ ಕರೆಯೊ 7 ಕ್ಷೋಣಿಯೊಳಗೆ ನಿನಗಾರೆಣೆಕಾಣೆನೊ ವೀಣೆವೆಂಕಟ ನೀ ಸಂಕಟ ಹರಿಸೊ 8 ಪಾಲಿಸಯ್ಯ ಪ್ರಹ್ಲಾದ ವ್ಯಾಸ ಭೂ ನಲ್ಲ ನೀನಹುದೋ ಬಾಹ್ಲೀಕ ಪ್ರಭುವೇ 9 ಬಗೆ ಬಗೆ ಪಾಪೌಘಗಳನು ಕಳೆಯುವ ರಘುಪತಿಕಿಂಕರ ಶ್ರೀ ರಾಘವೇಂದ್ರ 10 ಪವನಾಂತರಾತ್ಮ ಶ್ರೀ ವೇಂಕಟೇಶ ಪದ ಕುವಲಯಕೆ ನೀ ಕುಮುದಬಾಂಧವ 11 ಶಂಕುಕರ್ಣ ಲಂಕೇಶನನುಜ ಶ್ರೀರಾಮ- ಕಿಂಕರನಕಳಂಕಮೂರುತೇ12 ಮರುತಮತಾಬ್ಧಿಯ ಸಾರಸುಧೆಯನಿತ್ತೆ ಉರಗಾದ್ರಿವಾಸವಿಠಲನ ದೂತ13
--------------
ಉರಗಾದ್ರಿವಾಸವಿಠಲದಾಸರು
ದೇವದೇವತೆಗಳ ಸ್ತುತಿ ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ ಭಕುತರ ಪೊರೆವಾ ಅ.ಪ ದುರಿತ ತಿಮಿರಕೆ ಸವಿತ ವ್ರಾತ ಸೇವಿತ ತ್ವರಿತ ಮಧ್ಬಂಧು ಪೊರೆಯೊನೀನೆಂದು ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1 ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ- ಭಾರ್ಗವಿ ಪ್ರಕಟನಾಗಿಹನ 2 ತೋರಿಸುವದಕೆ ಅಸುರನ ಮಥಿಸಿ ನೆಲಸಿಕರುಣದಿ ದಿವಿಜರೊಡೆಯನ3 ಪೋಪುದು ವೃಜಿನ ತಿಳಿವದು ಮುನ್ನ ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ ಹೃದಯದಿ ಪೊಳಿವ 4 ತರುವರ ಸಂಸ್ಥಾ ಚರಿತ ತ್ರಿಗುಣಾತೀತ ಪದಯುಗಲ ಬಿಡದನುಗಾಲ ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5
--------------
ಕಾರ್ಪರ ನರಹರಿದಾಸರು
ನೀನೆ ಗತಿಯೊ ಎನಗೆ ಜಾನಕೀಶನೆ ಎನ್ನ ಮಾನದಿಂ ಕಾಯಲಿಕ್ಕೆ ಪ ದೀನರ ಸಮಯಕ್ಕೆ ನೀನಾಗದಿರ್ದರೆ ಜ್ಞಾನಿಗಳೊಪ್ಪುವರೇ ಜಾಹ್ನವೀಜನಕ 1 ಮೃತ್ತಿಕೆ ಬಾಯೊಳು ತತ್ತರಬಹುತಿಹ್ಯೆ ಭಕ್ತನ ಪಿಡಿದೆತ್ತಿ ತುರ್ತು ಸಲಹು ದೇವ 2 ಉಗ್ರತಾಪದಿ ಸಮಗ್ರ ಪರಿಹರಿಸೆನ್ನ ಶೀಘ್ರದಿ ಬಾ ಭಕುತಾಗ್ರಣಿ ಶ್ರೀರಾಮ 3
--------------
ರಾಮದಾಸರು
ಬಂದನೊ ಸುಜನರ ಸಂದಣಿಯೊಳಗತಿಸುಂದರ ರಥವೇರಿ ಗುರುವರ ಬಂದನೊ ಪ ಬಂದಿ ಜನರು ಮುದದಿಂದ ಬಹುಪರಾಕೆಂದು ನುಡಿಯಲಾನಂದ ಬೀರುತ ಬಂದನೊ ಅ.ಪ. ಕ್ಷಿತಿ ಸುರಪತಿ ಶುಭಮತಿ ಬಲ್ಮತದವರೊಯತಿ ಪರರತಿಶಯ ದಶಮತಿ ಸಂ-ಸ್ಕøತ ಭಾಷಣದವರೊ ಭಯಹರಣನೆಂಬೊ ವಾ-ರುತಿಯ ಕೀರುತಿಯ ಪೂರುತಿಯ ಕೇ-ಳುತ ಮಹಿಮಾಂಗಣಕಥಿಸುತ ಗ್ರಂಥಿಸುತ ತುತಿಶುತನುತಿಸಿ ಯತಿ ಶಿರೋಮಣಿಗೆರತುನ ಖಚಿತವಾದಾರುತಿಯ ಬೆಳಗಿರೆ 1 ಸುರತರು ಶುಭ ಧೊರೆಯೋ ವಾಗ್ಝರಿಯೋಸರಸಾರ್ತಿ ಜನಗಳ ನೆರೆಸುತಾದರಿಸುತಾಬಲು ಸುಖ ಸುರಿಸುತಾ ದರಿದ್ರವ ತರಿದುಪೊರೆದೂ ಕರೆದವರಿಗೆ ಕೈ-ಶರೆಯಾಗುವೆನೆಂಧರುಷದಿ ಗುರುವರ ಬಂದನೊ 2 ವಾಲಗ ಘೊರ್ಮಿಡೆ ಭಟರುಗಳ ಹೆಗಲ ಮ್ಯಾಲೆಝಗ ಝಗಿಸುವ ಛಡಿಗಳೊ ಕುಣಿಕುಣಿದಾಡುವವರಹಿ ವೇಣಿಗಳೋ ವಾಣಿಗಳು ಶ್ರೀಣಿಗಳು ಶೋಭಿಸೆಸುಜನರು ಕೈ ಮುಗಿವರು ನಗುವರುಸಂಭ್ರಮದಿಂದ ಬಿಗಿವರು ದೃಗಾರೋಢನದಿಜಿಗಿದು ಅಘದೂರೊಗೆದ ಜನರೊಳುವೆಗ್ಗಳದಲಿಂದಿರೇಶನ ಭಕುತಾಗ್ರಣಿ ಬಂದನೊ 3 ಇಲ್ಲಿ ವರ್ಣಿತವಾದ ಯತಿಗಳು ಯಾರೆಂದು ತಿಳಿಯದು.
--------------
ಇಂದಿರೇಶರು