ಸ್ಮರಿಸೈ ಸತತವು ಸಂಸ್ಮರಿಸೈ ಸತತವು ಪ
ಯತಿಗುಣ ಭೂಷಣ ವ್ಯಾಸ ಯತೀಂದ್ರರ ಅ.ಪ
ಗುರುಬ್ರಹ್ಮಣ್ಯರ ಕರಕಮಲದಿ ಪುಟ್ಟಿ
ಪರಮ ಕೀರುತಿಯಿಂದ ಮೆರೆದ ಯತೀಂದ್ರರ 1
ಸುಖಬೋಧ ಸದಾಗಮಸಾರವ ನಿಜ
ಮುಖದಿಂದ ಭೂಸುರರೊಳಗರುಹಿದವರ 2
ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವ
ಚಂದದಿ ರಚಿಸಿ ಆನಂದಗೊಂಡವರ 3
ವರಕರ್ಣಾಟಕ ಸಿಂಹಾಸನದಲಿ
ಮರಕತಮಣಿಯಭೀಷೇಕ ಪಡೆದವರ 4
ಉನ್ನತ ಗುಣ ಸುಖ ಚಿನ್ಮಯ ರೂಪ ಪ್ರ
ಸನ್ನ ಶ್ರೀರಾಮನ ಭಕುತವರೇಣ್ಯರ 5