ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ಪಶುಪತಿ ಸುಲೋಲ ನಿನಗೊಪ್ಪಿತರು ನೂರು ಜಪಶ್ವಾಸ1ಯೋಗಭೋಗಾರೋಗ್ಯ ಭಕ್ತಿಕರ್ಮಾಂತರಾಯಾಗಮವನಳಿದುರ ಪರವಶವಾಗಿಸಾಗಿ ಸಾಧನಗಳಳವಟ್ಟು ಶ್ರೀ ಗುರುಕರುಣವಾಗುವಂದದಿ ನಡೆದ ಸನ್ಮಾರ್ಗಗಳಿಗೆ 2ಕರುಣದಿಂ ಚಿಕನಾಗಪುರದಿ ಭಕುತರಿಗಾಗಿಗುರುವಾಸುದೇವಾರ್ಯನೆನಿಸಿ ಮ'ಮೆಗಳಾಮೆರೆವ ವೆಂಕಟರಮಣ ಭಾವರಾಮೇಶ್ವರವರತನಯ ತದ್ಯಹಸ್ತಂಭಕೃತ ಸದನಾ 3
--------------
ವೆಂಕಟದಾಸರು
ಭಕುತರಿಗಾಗಿ ನೀ ಬಡುವ ಕಷ್ಟಗಳು ಅಕಟ ಪೇಳಲಳವೆ ( ನೋಡಲಳವೆ) ಲಕುಮಿ ಪತಿಯೆ ಯಾತಕೆ ವೃಥಾನಿಕರಕೆ ಸುಖವೀವೆಕಾವೆ ಪ ಮಂದಿಮನ ವಲಿಸಿ ಮದುವೆ ನೀನು ಮ ತ್ತೊಂದು ಮಾಡಿಕೊಳುತ್ಯಾ ಅಂದಣಾದಿ ಐಶ್ವರ್ಯವನ್ನು ಪರರಿಂದ ಕೇಳಿಕೊಳುತ್ಯಾ ನಿಂದೆ ಮಾಡುವರೆಂಬೊ ಭಯದಿ ಅವರ್ಹಿಂದೆ ಹಿಂದೆ ಇರುತ್ಯಾ ಅಂದವಾದ ಆಟಗಳೊಳಗೆ ಇದುವಂದು ಎನುತ್ಯಾದೇವ 1 ಸಡಗರದಲಿ ಕರಪಿಡಿದು ಕಾಯ್ದೆ ನೀ ಹುಡುಗರೀರ್ವರನ್ನು ಮಡುವಿನೊಳಗೆ ಆ ಮಕರಿಯಿಂದ ಕಾಲ್ಹಿಡಿಸಿಕೊಂಡವನ್ನ ಮಡದಿಗಂತು ಗಡಿತಡಿಯದೆ ನೀಡಿದಿ ಉಡುಗೆ ಅಗಣಿತವನ್ನು ಕಡಿಗೆ ನಿನ್ನ ಕರದೊಂದು ದಿನಾದರು ಬಡಿಶ್ಯಾರೆ ಸುಖವನ್ನು ಏನು 2 ಏನು ತಪ್ಪು ನಿನ್ನವರು ಮಾಡಿದರು ಕಾಣಬಾರವು ನಿನಗೆ ವೈರಿ ಪರಪ್ರಾಣಹಾರಿಗಳ ಪೊರೆದು ಕರುಣಿ ಸುರಧೇನು ಬಾರೊ ಬ್ಯಾಗ ಮಾನಸ ಮಂದಿರಕೆ ಈಗ 3
--------------
ಅಸ್ಕಿಹಾಳ ಗೋವಿಂದ
ವಾಸುದೇವ ತವÀ ದಾಸೋಹಂ ಕೇಶವ ಎನ್ನಾ ದೋಷಗಳೆಣಿಸದೆ ಪೋಷಿಸು ಹರಿ ತವ ದಾಸೋಹಂ ಪ ಕರಿ ಸಕಲ ಲೋಕಕರುಹಿದ ವಾರ್ತೆ ಯುಕುತಿಗಳಿಂದಾ ಸ್ತುತಿಸಿ ದ್ರೌಪದಿ ಪ್ರಕಟಿಸಿದಳು ಹರಿ ತವ ಕೀರ್ತಿ 1 ಸಕಲರಲ್ಲಿ ವ್ಯಾಪಕನೆಂಬುದು ಬಾಲಕ ಪ್ರಲ್ಹಾದ ಪ್ರಕಟಿಸಿದಾ ಭಕುತನಾದ ಮಧ್ವಮುನಿ ಹರಿ ಸರ್ವೋತ್ತಮ ಹೌದುಹೌದೆನಿಸಿದಾ 2 ಭಕುತರಿಗಾಗಿ ಜಗವ ಸೃಷ್ಟಿಸಿದಿ ಭಕುತರಿಗಾಗವತರಿಸಿದಿ ಭಕುತರು ನಿನ್ನಾ ಭಜಿಸದಿದ್ದರೆ ಸಕಲರರಿವರೆಂತೊ ಜಗದಿ 3 ಅವರಂದದಿ ನಾನಲ್ಲವೋ ಶ್ರೀಹರಿ ಅವರ ದಾಸರ ದಾಸನೋ ನಾ ಪಾದದಿ ಕೊಡು ಭಕುತಿಯನಾ 4 ಮೆಟ್ಟುವ ಹಾವಿಗೆ ಮಾಡಿ ಎನ್ನನು ಇಟ್ಟುಕೋ ತವ ಪದಗಳಲಿ ಥಟ್ಟನೆ ಮನದಿಷ್ಟ ಪೂದ್ವೆಸೊ ಹನುಮೇಶ ವಿಠಲ ತ್ವರ ಕರುಣದಲಿ 5
--------------
ಹನುಮೇಶವಿಠಲ