ನಂದನಂದನ ಗೋವಿಂದ ಮುರಾರಿ
ಸುಂದರ ಮೂರುತಿ ಸುಖವಿಲಾಸಾ ಪ
ಚಂದದಿಂದಲಿ ನಿಮ್ಮ ಸ್ತುತಿಸುವ ಭಕುತರಾ-
ನಂದದಿ ಕಾಯ್ವ ಮುಕುಂದ ಮಹಾನುಭಾವ 1
ಸುರಮುನಿ ಪೂಜಿತಾ ಸುಗುಣ ಪ್ರಖ್ಯಾತಾ
ಮೂರ್ತಿ 2
ವೆಂಕಟಾದ್ರಿಯವಾಸಾ ವಿಜಯಶ್ರೀ ಜಗದೀಶಾ
ಮೀನಾಂಕ ಜನಕಹರೆ 3
ವೇದಗೋಚರ ವೇಣುನಾದ ವಿನೋದ ಕೃಷ್ಣಾ
ಮಾಧವ ಕೇಶವ ಯಾದವ ಕುಲಪತಿ 4
ಸಿಂಧು ಪನ್ನಗಶಯನ 'ಶ್ರೀ ಹೆನ್ನವಿಠ್ಠಲಾ' 5