ರಂಗ ಬಂದ ಬೃಂದಾವನದಲಿ ನಿಂದಕೊಳಲಿನ ಧ್ವನಿ ಬಹು ಚೆಂದ ಪ
ನಂದಗೋಪಿಯರ ಕಂದ ಮುಕುಂದಸುಂದರಿಯರ ಆನಂದ ಗೋವಿಂದ ಅ.ಪ
ಮಂದಗಮನೇರ ಕೂಡಿ ಸರಸವನಾಡುತಇಂದಿರೆಯರಸ ನಗುತ ಕೊಳಲನೂದುತಎಂದೆಂದಿಗೂ ತನ್ನ ನಂಬಿದ ಭಕ್ತರಬಂದು ಪೊರೆವ ಗೋವಿಂದ ಮುಕುಂದ 1
ಉದಧಿ ಸಂಚಾರ ಗುಣಗಂಭೀರನವನೀತದಧಿ ಭಾಂಡಚೋರ ರುಗ್ಮಿಣಿ ಮನೋಹರಮದನ ಗೋಪಾಲನು ಭಜಿಸುವ ಭಕುತರಹೃದಯದೊಳಗೆ ನಿಂದು ಮುದವನು ಕೊಡುವ2
ಮಧುರೆಯಿಂದಲಿ ಬಂದ ಮಾವನ್ನ ಕೊಂದಕಡೆಗೋಲ ನೇಣ ಕೈಲಿ ಪಿಡಿದ ದ್ವಾರಕಾವಾಸಹಡಗಿನಿಂದಲಿ ಬಂದು ಉಡುಪಿಲಿ ನೆಲೆಸುತಬಿಡದೆ ಪೂಜೆಗೊಂಬ ಒಡೆಯ ಶ್ರೀಕೃಷ್ಣ3