ಪ್ರಭುವರ ಮರೆದ್ಯಾ ನಟರಾಜವರದ ಪ
ಪ್ರಭುವರ ಮರೆದ್ಯಾ
ಸೊಬಗಿನ ಹರಿ ಭಕುತರಭಿಮಾನ ತೊರೆದ್ಯಾ ಅ.ಪ
ಭವ ಮಾಯಾಜಾಲದಿ ನಾನು
ತೋಯಜಾಕ್ಷನೆ ನಿನ್ನ ಭಾವಿಸಿ ಮೊರೆಯಿಟ್ಟು 1
ಘೋರಸಂಸಾರದೊಳು ಘೋರಬqದೆಯಿನ್ನು
ಪಾರಮಹಿಮನೆ ನಿನ್ನ ಸಾರುತ ಮರೆಹೊಕ್ಕೆ 2
ದಾಸರೋಳ್ನಿರ್ದಯ ಭೂಷಣವೆ ನಿನಗಿದು
ಪೋಷಿಸು ದಯದಿಂದ ಶ್ರೀಶ ಶ್ರೀರಾಮನೆ 3