ಸೇವಕಗೆ ದಯಮಾಡಲೊ ಹರಿ ದೇವ ನಿಮ್ಮ
ಪಾವನಪಾದ ಭಾವದಿಂ ನಮಿಸಿ ಪಾವನನಾಗ್ವೆ ಪ
ಕಲ್ಲನು ನಲ್ಲೆಯ ಮಾಡಿದ ಪಾದ
ಕಳ್ಳನ ರಿಸಿಯೆಂದೆನಿಸಿದ ಪಾದ
ನಲ್ಲೆಯ ಬೆಂಬಲ ನಿಂತಿರ್ದ ಪಾದ
ಖುಲ್ಲ ಪೂತನಿಯ ಮೆಟ್ಟಿದ ಪಾದ1
ಮಂಕು ಕಾಳಿಂಗನ ತುಳಿದ ಪಾದ
ಶಂಖಾಸುರನ ಒದೆದ ಪಾದ
ಜಿಂಕೆಯನು ಹಿಂಬಾಲಿಸಿದ ಪಾದ
ಪಾದ 2
ಭೂಮಿ ಓರಡಿ ಮಾಡಿದ ಪಾದ
ಭಾಮೆ ದೃಢದಿ ಪೂಜಿಸಿದ ಪಾದ
ಪ್ರೇಮದಿಂ ಭಕುತರನುದ್ಧರಿಪ ಪಾದ
ಸ್ವಾಮಿ ಶ್ರೀರಾಮ ತವ ಕೋಮಲಪಾದ 3