ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವನ ಪಾಲಿಸಿದರೆ ನಿನಗೆ ಪುಣ್ಯ ಪ ಅವನಿಯೊಳೆಂದೆಂದಿಗೂ ನಾನೆ ಧನ್ಯ ಅ.ಪ ನೆಟ್ಟ ಮುಳ್ಳು ಕಿತ್ತು ಬಿಸುಟಂತೆ ಮಾಡು | ಘಟ್ಟಿಯಾಗಿ ಭಕುತನ್ನ ಕಾಪಾಡು1 ಸಾಧನ ಪ್ರಾಣಿಗಳಿರಲಿ ಬೇಕು | ವಾಕು 2 ತ್ರಿಜಗದೊಳಗೆ ನಿ£ಗ್ಯಾರೆಣೆಯೆ | ವಿಜಯವಿಠ್ಠಲ ಕೇಳೆನ್ನ ದೊರೆಯೆ 3
--------------
ವಿಜಯದಾಸ
ನಸು ನಗುತ ನಿಂತ ಬಗೆಯು ಪ ತಿಳಿದು ಪೂಜೆಯು ಮಾಡುವ ಭಕುತರನು ಬಳಿಗೆ ಕರೆವುದು ತೀವ್ರವೊ ಖಳಕುಲದ ಜನರು ಬರಲು ಹೋಗೆಂದು ಕಳುಹುವ ಬಗೆಯ ಏನೊ ಕೃಷ್ಣ 1 ಸುಳಿದ ಜನಗಳ ಕೂಡ ಸುಂಕವನು ಸೆಳೆಕೊಂಬ ಬಗೆಯು ಏನೊ ಕೆಳದಿಯರ ಬಂದವರನಾ ಮೋಹಿಸಿ ಕೊಳಲನೂದುತಲಿ ನಿಂದಿಯೊ ಕೃಷ್ಣ 2 ಬಲಿಯ ಕಾಯಿದ ಬಗೆಯಲಿ ದಾಸರನ ಚಲಿಸದಲೆ ಕಾವ ಬಗಿಯೊ ನೆಲೆ ವಾಸುದೇವವಿಠಲ ಭಕುತನ್ನ ಸಲಿಗೆ ಬಿನ್ನಪ ಸಲಿಪುದೊ 3
--------------
ವ್ಯಾಸತತ್ವಜ್ಞದಾಸರು
ನೋಡಿ ನಾ ಧನ್ಯನಾದೆನೊ ತೋತಾದ್ರೀಶನ ನೋಡಿ ಧನ್ಯನಾದೆ ನಾಡೊಳು ತನಗೆಲ್ಲಿ ಈಡಿಲ್ಲೆನಿಸುವನ ನೋಡಿ ಧನ್ಯನಾದೆನೊ ಪ ಆರೊ ಮಹಾರೂಪ ಬಂದು ಏಕಾಂತದಲ್ಲಿ ಆರಾಧಿಸಿದಾತನಂದು ಭಕುತಿ ಬಿಡದೆ ವಾರವಾರಕ್ಕೆ ಗತಿಯೆಂದು ಈ ರೀತಿಯಲ್ಲಿ ಇರೆ ತೋರಿದ ಕರುಣ ನಿನ್ನಾ 1 ಭಕುತನ್ನ ತಪಸಿಗೊಲಿದು ವೇಗದಿಂದಲಿ ಲಕುಮಿ ರಮಣ ಸುಳಿದು ಬೇಡಿದಂಥಾ ಧಿಕವಿತ್ತು ರೋಷವಳಿದು ಸುಖದ ಭಾರತ ಪೇಳೊ ದಕ್ಕೆ ಮುನಿ ಮಾಡಿದ ದಾನಾ 2 ಧರಿಗೆ ದಕ್ಷಿಣ ದಿಕ್ಕಿಲಿ ಮಾಹೇಂದ್ರಿ ಮಹಿ ಧರನ ಸಮೀಪದಲ್ಲಿ ಪ್ರತಿದಿನ ಮೆರೆವ ವೈಭೋಗದಿಂದಲಿ ಕರುಣಿ ವಿಜಯವಿಠ್ಠಲ ವರಧೇನು ಎನಿಸುವನಾ3
--------------
ವಿಜಯದಾಸ
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ ದಾರಿಯ ತಪ್ಪಿ ಪೋಗುವ ಧೀರ ಫೋರನ್ನ ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ ಊರಿನವೊಳಗೆ ಅವನ ಆಗಾ ದೂರ ನೋಡುವರೆ ದೋಷಗಳ ವಿಚಾರಮಾಡುವರೆ ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ 1 ಹಸಿದು ಪರರ ಕೇಳದ ದ್ವಿಜವರಿಯನ್ನ ಶಿಶುವಿನ ನೋಡಿ ದಯದಿಂದ ಕರದಿನ್ನು ಹಸಿದ್ಯಾಕೊ ಎಂದು ಪಾಕವ ಮಾಡಿ ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2 ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ- ಕುಲ ತರಳನನು ನೋಡಿ ಕೃಪೆಯಿಂದ ಸುರನದಿ ಜಲವನೀವೆನೆಂದು ಬ್ಯಾಗನೆ ದಿವ್ಯ ಕಲಶವ ತಂದು ಬಾರೆಲೊ ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ ತೊಳಿಯ ಕೊಡುವೆನೆಂದು ತಡವ ಮಾಡುವರೆ 3 ಸುಶರೀರ ತನುವನು ಮನದಲಿ ಬಯಸಿ ತಾ ಉಸರದ ಮುನಿತನಯನ ಕಂಡು ತಾವಾಗಿ ಕುಶಲವ ಕೇಳಿ, ದೇವತ ವೈದ್ಯ ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ ರಸವನು ಪೇಳಿ, ಪಸಿ ನಿನ್ನಲಿದ್ದಾ ಕಿಸರು ಪೋದರೆ ಕೊಡುವೆವೆಂದು ನಿಲುವರೆ 4 ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ ಕೀರ್ತಿಯ ನೋಡಿಕೊ, ವಾಸುದೇವವಿಠಲನ ಮೂರ್ತಿಯ ಭಜಕ ಭಕ್ತರಾಭೀಷ್ಟ ಪೂರ್ತಿಗೆ ಜನಕ ನಿನ್ನಯ ಗುಣ ಸ್ಫೂರ್ತಿಗೆ ಜನಕ, ನಿನ್ನಯ ಗುಣ ಸ್ಫೂರ್ತಿ ಉಳ್ಳನಕ ಪಾಪದ ಲೇಶ ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5
--------------
ವ್ಯಾಸತತ್ವಜ್ಞದಾಸರು
ಸುಳಾದಿ ಧ್ರುವತಾಳ ಶ್ರೀನಿವಾಸನೆ ನೀನು ಬ್ಯಾಗನೆ ಬಂದು ಸಾನುರಾಗದಿ ಸಂಸಾರ ಬಿಡಿಸೋ ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ ಮಾನವ ಕಾಯ್ವುದು ಮಂಗಳಾಂಗನೆ ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ನಾನುನನ್ನದು ಎಂದು ಮಮತೆಯನೆ ಕೊಟ್ಟು ಅನ್ಯಾಯದಿಂದ ಎನ್ನzಣಿಸುವುದು ದಾನವಾಂತಕರಂಗ ಮುದ್ದುಮೋಹನವಿಠಲ ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1 ಮಠ್ಯತಾಳ ಎನ್ನಪರಾಧಗಳು ಅನಂತವಿರುವದನ್ನು ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2 ತ್ರಿವಿಡಿತಾಳ ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ ಸಂಭ್ರಮದಿಂದ ಕಾಯೊ ಕರುಣಾನಿಧೆ ಶಂಬರಾರಿಯಜನಕ ಮುದ್ದುಮೋಹನವಿಠಲ ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3 ಅಟ್ಟತಾಳ ಏನೇನುದಾನ ಅನಂತ ಮಾಡಲೇನು ಕಾನನದಲಿ ಪೋಗಿ ತಿರುಗಿತಿರುಗಿದಂತೆ ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ ವಾನರ ವಂದ್ಯ ಮುದ್ದುಮೋಹನವಿಠಲ ನಾನಾವಿಧದಿಂದ ನಂಬಿದೆನೊ ಹರಿಯೇ4 ಆದಿತಾಳ ನೀನೆ ಅನಾಥಬಂಧು ನೀನೆ ಅದ್ಭುತಮಹಿಮ ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5 ಜೊತೆ ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ
--------------
ಮುದ್ದುಮೋಹನವಿಠಲದಾಸರು