ನೀನೆ ಗತಿ ಭಕುತಜನಕೆ
ಧೀನದಯಾಸಿಂಧು ಹರಿಯೆ ಪ
ವನದಿಯಿರಲು ಗುಹೆಯಪೊಗಲು
ಮನೆಯೊಳಿರಲು ಗಿರಿಯನೇರಲು
ದಣವಿನಿಂ ಬಳಲುತಿರಲು
ಪರದೇಶ ದೇಶ ತಿರುಗಲು 1
ಒಡಲಿಗಿಲ್ಲದೆ ತೊಳಲುತಿರಲು
ಬಡತನದಿಂ ಬೇಡುತಿರಲು
ಕಡಲಧುಮುಕಿ ಘೋರಬಡಲು
ಪೊಡವಿಪರ ಕೈಯೊಳ್ಸಿಗಲು 2
ಕಾಮಿಜನರ ಕಾಮಿತಂಗಳ
ಪ್ರೇಮದಿತ್ತು ಕಾಯ್ವ ಮಮ
ಸ್ವಾಮಿ ಶ್ರೀರಾಮ ನಂಬಿದವರ
ಕಾಮಧೇನು ಪರಮಪುರಷ3