ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಯಿತ್ರಿ ಹಿರಿಮೆ ಹತ್ತು ರೂಪದ ಗಾಯಿತ್ರಿ ನಿನಗೆ ರಂಗದ ತಾನ ಹತ್ತು ರೂಪಗಳಲ್ಲಿ ಕುಣಿಯುತಿಹೆ ನೀನು ಹತ್ತು ಸಲವಾದರೂ ಗಾಯಿತ್ರಿ ಜಪಿಸದಿರೆ ನಿನ್ನಲ್ಲಿ ಭೂಸುರತೆ ಉಳಿಯುವದೆಂತು? 89 ತನ್ನಾಮದರ್ಥವೇ ವ್ಯಾಪ್ತಿರೂಪದ ಮೀನು ಅಮೃತಸವನದಕತದಿ ಕೂರ್ಮನಿಹೆ ನೀನು ಭೂವರಾಹನು ನೀನು ವರೇಣ್ಯನಾಮಕನು ಶತ್ರುಭರ್ಜನದಿಂದ ಭರ್ಗನಾಗಿರುವೆ 90 ಪ್ರಾಣವನು ಮೇಲೆತ್ತಿ ಅಪಾನವನು ಕೆಳಗಿರಿಸಿ ಮಧ್ಯದಲಿ ವಾಮನನು ದೇವ ನೀನಿರುವೆ&ಚಿmಠಿ;ಟಿ, bsಠಿ;91 ಮಹಿಯ ಭಾರವ ತೆಗೆದ ಪರಶುರಾಮನು ನೀನು ಪ್ರಾಣನ ಪ್ರೀತಿಕರ ರಾಮ ನೀನಿರುವೆ 92 ಕಲಿಯುಗದ ದೇವನೇ ಜ್ಞಾನರೂಪದ ಕೃಷ್ಣ ಬುದ್ಧ ನೀನಿರುವೆ ಧರ್ಮ ಪ್ರಸಾರಣಕೆ ಹಯವನ್ನು ಚೋದಿಸುವ ಕಲ್ಕಿನಾಮಕ ನೀನು ತಿಳಿದು ಜಪ ಮಾಡು 93 ಗಾಯನದಿ ರಕ್ಷಿಸುವೆ ಗಾಯಿತ್ರಿಯೇ ನಮಗೆ ಬ್ರಾಹ್ಮತೇಜವನುಳಿಸಿ ರಕ್ಷಿಪುದು ನಮ್ಮ ಗಾಧಿಪುತ್ರನು ತಾನು ಕ್ಷತ್ರಿಯನದಾದರೂ ಬ್ರಹ್ಮರ್ಷಿಯಾಗಿ ಬಾಳಿದನು ನಿಜವೈ 94 ಸಿರಿವರನೆ ನೀನು ಭಾಸ್ಕರನ ಮಂಡಲದಲ್ಲಿ ಕಮಲದಾಸನದಲ್ಲಿ ಶೋಭಿಸುತಲಿರುವೆ ಚಕ್ರ ಶಂಖ ಮಕರಕುಂಡಲಾದಿಗಳಿಂದ ಲೆನ್ನ ಹೃದಯಕೈತಂದು ನೆಲೆನಿಲ್ಲು 95 ನಿನ್ನ ಸೌವರ್ಣ ತೇಜದ ಬೆಳಕಿನಿಂದೆನ್ನ ಆತ್ಮದ ಜ್ಯೋತಿಯನು ಬೆಳಗಿಸುತ ನೀನು ನಿನ್ನನ್ನೆ ಹಂಬಲಿಪ ಭವಬಂಧ ತಪ್ಪಿಸುವ ನಿನ್ನ ಬಳಿಬರುವ ದಾರಿಯನು ತೋರಿಸೆಲಾ 96 ಗಾಯಿತ್ರಿಯ ಜ್ಯೋತಿ ನಂದದಂತಿರಲು ನಾನಷ್ಟಾಕ್ಷರಿಯ ಮಂತ್ರ ಜಪಿಸುವೆನು ನಾನು ವಿದ್ಯುತ್ತಿನದು ರಕ್ಷೆ ನಾರಾಯಣನ ಮಂತ್ರ ಅದರಿಂದ ರಕ್ಷಣೆಯ ಮಾಡುವೆನು ನಾನು 97 ಆತ್ಮರಕ್ಷಕನು ಹರಿ ದೇಹರಕ್ಷಕನು ಹರ ಹರನ ದೇಹವು ಪ್ರಕೃತಿಪಂಚಕದಿ ರಚಿತ ಆತ್ಮದಲ್ಲಿರುವಹಂಕೃತಿಗೊಡೆಯ ಹರ ಹರಿಹರರೇ ದೇಹಾತ್ಮ ರಕ್ಷಣೆಯ ಮಾಡಿ98 ವಿದ್ಯುತ್ತು ಬಿಳಿ ಕಪ್ಪು ಕೆಂಪು ನೀಲಿಗಳೆಂಬ ಐದು ಮುಖ ಹರನಿಗಿಹುದದರಿಂದ ನಾನು ಪಂಚಾಕ್ಷರಿಯ ಮಾಡಿ ಹರನನ್ನು ಧ್ಯಾನಿಸುವೆ ಧರ್ಮಾಯತನದ ದೇಹ ರಕ್ಷಣೆಯ ಮಾಳ್ಪೆ 99 ವೈರಿ ಮನದಲ್ಲೆ ಹುಟ್ಟಿದವ ಮನದೊಡೆಯ ರುದ್ರನನ್ನೇ ಹೊಡೆಯಲೆಂದು ಐದು ಬಯಕೆಗಳೆಂಬ ಬಾಣದಿಂ ಹೊಡೆಯುತಿರೆ ಕಾಮದಹನವ ಹೊಂದಿ ಬೂದಿಯಾದನವ 100 ಆ ಕಾಮನೇ ಮತ್ತೆ ಅಂಗಹೀನನದಾಗಿ ರುದ್ರನನ್ನರ್ಧನಾರೀಶ್ವರನ ಮಾಡಿ ಮನವನ್ನು ಕೆಡಿಸುತಲಿ ಮಾನವರೆಲ್ಲರನು ದುಃಖದಾ ಮಡುವಿನಲಿ ಕೆಡಹುವನು ನಿಜದಿ 101 ದೇಹಸೃಷ್ಟಿಗೆ ಮೂಲ ಮಣ್ಣು ತೇಜವು ನೀರು ಈ ಮೂರು ಮೂರುವಿಧವಾಗಿ ಪರಿಣಮಿಸಿ ಪಾಲನೆಯು ನಡೆಯುವದು ದೇವರಿಂದಲೇ ಇದನು ಉಪನಿಷತಿನಾಧಾರದಿಂದ ಪೇಳುವೆನು 102 ಭಕ್ಷ್ಯಭೋಜ್ಯವು ಲೇಹ್ಯ ಪೇಯವೆಂಬೀ ನಾಲ್ಕು ಪ್ರಾಣದಾಹುತಿಯನ್ನು ನಾವು ಕೊಡುತಿಹೆವು ಅದರಿಂದ ಪಾಕವನು ಮಾಡುತ್ತ ದೇವನವ ಸಪ್ತಧಾತುಗಳನ್ನು ಮಾಡಿ ರಕ್ಷಿಸುವ 103 ತೇಜವದು ವಾಗ್ರೂಪ ತಾಳುವದು ಮತ್ತದುವೆ ಅಸ್ಥಿಮಜ್ಜಗಳಾಗುವವು ನಿಜವ ಪೇಳ್ವೆ ವೈದ್ಯಕೀಯಪರೀಕ್ಷೆಗೊಳಗಾಗಿ ತಿಳಿವೆ ನೀನ್ ಶ್ರುತಿತತ್ವವೆಂದೆಂದು ಸಾರುತಿಹುದಿದನೆ 104 ಮಣ್ಣಿನನ್ನವೆ ಮೊದಲು ಮನವಾಗಿ ಮತ್ತದುವೆ ಮಾಂಸ ರೂಪವ ತಾಳಿ ಮಲವದಾಗುವುದು ನೀರೆ ಮುಖ್ಯ ಪ್ರಾಣ ಮತ್ತೆ ಶೋಣಿತವಾಗಿ ಮೂತ್ರರೂಪವ ತಾಳಿ ಹೊರಗೆ ಹೋಗುವುದು 105 ಸ್ವೇದಜೋದ್ಭಿಜ್ಜ ಮತ್ತಂಡಜ ಜರಾಯುಜಂಗಳು ಎಂಬ ನಾಲ್ಕು ವಿಧ ಜೀವಜಂತುಗಳು ನಾರಾಯಣನು ತಾನು ಜಲವಾಸಿಯಾಗುತಲಿ ಜೀವಜಂತುಗಳನ್ನು ಸೃಷ್ಟಿ ಮಾಡುವನು 106 ನಿನ್ನ ಗುಣದೋಷಗಳ ಪರರೆಂಬ ದರ್ಪಣದಿ ನೋಡಿದರೆ ತೋರುವವು ನಿನ್ನವೇ ತಿಳಿಯೈ ಪರರಲ್ಲಿ ಕಾಣುತಿಹ ದೋಷಗಳನು ತೊರೆಯುತ್ತ ಗುಣಗಳನು ಎಣಿಸುವವ ಲೋಕಮಾನ್ಯ 107 ಊಧ್ರ್ವಮೂಲದ ದೇವನೂಧ್ರ್ವದ ಹಿಮಾಲಯದೊ ಳುತ್ತುಂಗ ನಾರಾಯಣಪರ್ವತದಲಿ ತಾರಕನು ರಾಮನಂತೆಲ್ಲ ನರರನು ತನ್ನ ಬಳಿಗೆ ಕರೆದೊಯ್ಯಲ್ಕೆ ಮೇಲೆ ನಿಂತಿರುವ 108 ಮಧ್ವಗುರುಹೃದಯಭಾಸ್ಕರನು ನಾರಾಯಣನು ಬದರಿಯೊಳಿಹ ನೆಲೆಗೆ ಕರೆಯಿಸುತಲೆಮ್ಮನ್ನು ಸೇವೆಯನು ಕೈಕೊಂಡು ಭಾವಗತನಾಗಿದ್ದು ಪ್ರೇರಿಸಿದನೀಕೃತಿಗೆ ಪ್ರಕೃತಿ ಪರಮಾತ್ಮ&ಚಿmಠಿ;ಟಿbs, ಠಿ; 109 ಆತ್ಮದಲಿ ಒಳಗಿದ್ದು ಅಂತರಾತ್ಮನು ನೀನು ಆತ್ಮದ ಬಹಿರ್ಗತನು ಪರಮಾತ್ಮ ನೀನು ದೇಹದಿಂ ಹೊರಗಿದ್ದು ಕಾಲಾತ್ಮಕನು ನೀನು ನೀನಿಲ್ಲದಿಹ ದೇಶಕಾಲವೆಲ್ಲಿಹುದು? 110 ಮೂರು ನಾಮಗಳಿಹವು ಶ್ರೀನಿವಾಸನೆ ನಿನಗೆ ಅವುಗಳನು ನೆನೆದರೇ ಪಾಪ ಪರಿಹಾರ ಅಚ್ಯುತಾನಂತಗೋವಿಂದನೆನ್ನುವ ನಾಮ ಕೃತದೋಷ ಪರಿಹಾರಕಾಗಿ ಜಪಮಾಳ್ಪೆ 111 ಮಧುರಾಖ್ಯನಾಮವನು ಹಿಂದು ಮುಂದಾಗಿಸುತ ಮಧ್ಯದಕ್ಷರವನ್ನು ಕೈಯಲ್ಲಿಯಿರಿಸು ನಾಮಜಪ ಮಾಡದಿರೆ ಅವನ ಮುಖಕೆಸೆದು ನೀ ನನವರತ ಜಪಮಾಡಿ ಸಿದ್ಧಿಪಡೆ ಮನುಜಾ 112 ಅಣುವಿಂದ ಅಣುವಾಗಿ ಮಹದಿಂದ ಮಹತ್ತಾಗಿ ನಿನ್ನ ದರುಶನವು ಜನರಾರಿಗೂ ಇಲ್ಲ ಮಧ್ಯಕಾಲದಿ ಮಾತ್ರ ದರುಶನವು ವಸ್ತುವಿಗೆ ಅವತಾರ ರೂಪಗಳೆ ಪೂಜಾರ್ಹವಿಹವು 113 ಎಲ್ಲರೂ ಶ್ರೀಹರಿಯ ನೆಲೆಯೆಂದು ನೀನರಿತು ಮಮತೆಯಿಂ ನೋಡುತಲಿ ಸುಖವನನುಭವಿಸು ಹೊಲೆಯನಾದರು ನಿನ್ನ ನಂಬಿ ಮರೆಹೊಕ್ಕಿದರೆ ಕೈಬಿಡದೆ ನೀನವನ ರಕ್ಷಿಸಲೆ ಮನುಜಾ 114 ಹಲವಾರು ಜಾತಿಗಳು ಹಲವಾರು ಮತಗಳಿಹ ವವುಗಳಿಗೆ ಮೂಲಮತ ವೇದಮತವೊಂದೆ ಬೈಬಲ್ ಖುರಾನ್ ಮೊದಲಾದ ಪೆಸರಿಂದದುವೆ ಲೋಕದಲ್ಲೆಲ್ಲು ಪಸರಿಸುತಲಿಹವು 115 ಭವಬಂಧನವ ಕಳೆದು ತನ್ನ ಬಳಿಗೊಯ್ಯುವವ ನೀನಲ್ಲದಿನ್ನಾರು ಹರಿಯೆ ಶ್ರೀರಾಮ ಸಾಂತಾನಿಕದ ಲೋಕಕೊಟ್ಟು ರಕ್ಷಿಸಿದ ಹರಿ ತಾರಕನು ನೀನಿರುವೆ ನೀನೆ ಗತಿ ದೊರೆಯೆನಗೆ 116 ಪರಶುರಾಮನ ರೂಪದಿಂದ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದಿ ನೀನು ಅವನ ಹೃದಯವ ಹೊಕ್ಕು ಮಧ್ವಮತವನು ಜಗದಿ ದೇವ ಪಸರಿಸಿದೆ 117 ಮಿನುಗು ಹುಳಗಳ ಸೃಜಿಸಿ ಬೆಳಕನದರಲ್ಲಿರಿಸಿ ಕಗ್ಗತ್ತಲೆಯ ಕಾಡುಗಳಲಿ ರಕ್ಷಿಸುವೆಯೊ ಅಂತೆಯೇ ನಮ್ಮ ದೇಹದೊಳಗಿದ್ದು ನೀನ್ ಪ್ರತಿಬಿಂಬ ಜೀವವನು ರಕ್ಷಿಸುವೆ ದೇವಾ 118 ಪರಶುರಾಮನು ರಾಮ ಪರಶುರಾಮನು ಕೃಷ್ಣ ನರನು ನಾರಾಯಣನು ವ್ಯಾಸ ಮೊದಲಾಗಿ ಒಂದಾಗಿ ಬೇರೆಯಾಗಿಯೆ ರೂಪ ತಾಳುತ್ತ ಭಕ್ತರಕ್ಷಕನಾಗಿ ದುಷ್ಟವಂಚಕನು 119 ಇಂದ್ರಿಯಂಗಳ ಹೊರಮುಖವಾಗಿ ಸೃಷ್ಟಿಸಿದೆ ಹೃದಯಗುಹೆಯಲ್ಲಿರುವೆ ಕಾಣುವುದದೆಂತು? ಮನದಬಾಗಿಲ ತೆರೆದು ಅಂತರ್ಮುಖದಿ ನೋಡೆ ಪ್ರತ್ಯಗಾತ್ಮನು ನೀನು ಕಾಣುವದು ನಿಜವು 120 ಕುರುಡನಾಗಿಹೆ ನಾನು ಕುರುಡು ಇಂದ್ರಿಯಂಗಳಿಂ ತೋರುಬೆರಳಿಂದ ತೋರಿಸಲು ಬಯಸಿದೆನು ನನಗೆ ಅಂಜನಹಾಕಿ ತೋರು ನಿನ್ನ ಜ್ಯೋತಿ ವಿಶ್ವತಶ್ಚಕ್ಷು ಪರಮಾತ್ಮ ಶರಣೆಂಬೆ 121 ಕೋಟಿ ಗೋದಾನಕ್ಕೂ ಮಿಗಿಲಾಗಿ ಪುಣ್ಯಕರ ನಿನ್ನ ನಾಮದ ಜಪವು ತಾರಕನು ನೀನು ತಿಳಿದ ಗುಣಸಾಗರದ ಹನಿಗಳನು ಹೆಕ್ಕಿ ನಾನ್ ನುತಿಸಿದೆನು ನಿನ್ನನ್ನು ಮುಕ್ತಿದಾಯಕನೆ 122 ಸುಗುಣೇಂದ್ರ ಮೊದಲಾದ ಯತಿವರರ ಪೂಜೆಯಿಂ ಜ್ಞಾನರೂಪದ ನೀನು ಸಂತಸವ ತಾಳಿ ಜ್ಞಾನಭಂಡಾರಿ ಯತಿವರರಿಗೆಲ್ಲರ್ಗೆ ಜ್ಞಾನಾಮೃತವ ಕೊಟ್ಟು ರಕ್ಷಿಸುವೆ ಹರಿಯೇ 123 ಭವದಿ ಬಂಧಿಸಿಯೆನ್ನ ಭಾವಗತನಾಗಿದ್ದು ದುಷ್ಕರ್ಮ ಮಾಡಿಸುತ ಫಲ ಕೊಡುವದೇಕೆ? ಎನ್ನ ಕೈಯಿಂದೆತ್ತಿ ಬಳಿಗೆ ಕರೆದೊಯ್ಯು 124 ಉಚ್ಛ್ವಾಸ ನಿಶ್ವಾಸ ರೂಪದಿಂದೊಳಹೊಕ್ಕು ಆತ್ಮ ಸಂದರ್ಶನವ ಮಾಡುತ್ತ ವಾಯು ಇಪ್ಪತ್ತಒಂದುಸಾಸಿರ ಮತ್ತೆ ಆರ್ನೂರು ಹಂಸಮಂತ್ರದ ಜಪವ ಮಾಡುವನು ದಿನಕೆ 125 ಪರಶುರಾಮನು ರಾಜರೆಲ್ಲರನು ಸಂಹರಿಸಿ ಭೂಮಿಯನು ನಕ್ಷತ್ರಮಂಡಲವ ಮಾಡಿ ವಿಶ್ವಜಿತ್‍ಯಾಗದಲಿ ಕಶ್ಯಪರಿಗೀಯಲದ ಕಾಶ್ಯಪಿಯ ನಾಮವನು ಭೂಮಿ ಪಡೆಯಿತಲಾ 126 ಕಶ್ಯಪರ ತಪದಿಂದ ರಾಜರಿಲ್ಲದ ಭೂಮಿ ಭಾರದಿಂ ಕೆಳಗಿಳಿಯೆ ಊರುವಿಂದೆತ್ತಿ ಅವಳ ಮೊರೆ ಕೇಳಿ ರಾಜವಂಶವನ್ನುದ್ಧರಿಸೆ ಉರ್ವಿನಾಮವ ಪಡೆಯಿತು ಭೂಮಿ ನಿಜವು 127 ವ್ಯಾಸಪುತ್ರನದಾಗಿ ವ್ಯಾಸಪಿತ ನಾನಾಗಿ ವ್ಯಾಸಭವನದ ಒಳಗೆ ಭದ್ರನಾಗಿದ್ದೆ ಈ ಭವನದಿಂದೆನ್ನ ನಿನ್ನ ಭವನಕೆ ಒಯ್ಯು ಅಮೃತಲೋಕದಿ ನಿನ್ನ ಸೇ, ವೆ ಗೈಯ್ಯುವೆನು 128 ರಾಧಿಕಾರಮಣನೆ ಮಧುರಾಪುರಾಧಿಪತಿ ದಾನವಾಂತಕ ಕೃಷ್ಣ ಸತ್ಯಸ್ವರೂಪ ವಿಶ್ವಜ್ಞ ಪೂಜಿತನೆ ರಕ್ಷಿಸೆನ್ನನು ಹರಿಯೇ ಚಿತ್ತದಲಿ ನೆಲೆನಿಲ್ಲು ತಂದೆ ಕಾಪಾಡು 129 ಇಂದ್ರಾಣಿ ತಪಗೈದ ತಾನದಲಿ ಚ್ಯವನಮುನಿ ವೇದಾದ್ರಿ ಎಂಬಲ್ಲಿ ತಪಗೈಯುತ್ತಿದ್ದ ಸ್ವರ್ಣವರ್ಣವನ್ನಿತ್ತು ಕಣ್ಣಿತ್ತ ಸ್ವರ್ಣನದಿ ಹರಿಯುತಿಹುದಿಲ್ಲಿಯೇ ಈಗಲೂ ನಿಜವು 130 ಪ್ರಕೃತಿ ಪ್ರಕೃತಿಯ ಭೇದ ಪ್ರಕೃತಿ ಜೀವದ ಭೇದ ಜೀವ ಜೀವಗಳ ಭೇದ ಮೂರನೇಯದು ಜೀವೇಶ ಭೇದವದು ಪ್ರಕೃತೀಶ ಭೇದವೆಂ ದಿಹವು ಪ್ರಪಂಚದಲಿ ಪಂಚಭೇದಗಳು 131
--------------
ನಿಡಂಬೂರು ರಾಮದಾಸ
ಜೋ ಜೋ ಎನ್ನಿ ನಿರ್ವಿಕಾರಿಯಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿವೇದ ನಾಲಕು ಎಂಬ ನೇಣನೆ ಹೂಡಿಸಾಧನ ಚತುಷ್ಪಯ ಹಾಸಿಗೆ ಹಾಸಿಬೋಧಾನಂದಳನು ಭಾವದಿ ತಂದು ನೋಡಿ 1 ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ 2 ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟುಶರಶಾಙರ್É ಬತ್ತಳಿಕೆ ಎಡಭಾಗದಲ್ಲಿಟ್ಟು ದುಷ್ಟ ಶತ್ರುಗಳ ಕಾಲದೆಸೆಗಿಟ್ಟುಪರಮಾಮೃತ ಪಾನ ಪಾತ್ರೆ ತುಂಬಿಟ್ಟು 3 ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ 4 ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ 5 ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ 6 ಯೋಗಾರೂಢಕೆ ಏಕಾಕ್ಷರಿ ಜೋ ಜೋಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋಯೋಗಿ ಬೃಹತ್ಯಾಗಿ ವಿರಾಗಿ ಜೋಜೋಯೋಗಿಗಳ ಭಂಡಾರಿ ಯೋಗೀಳೆ ಜೋಜೋ 7 ಚಿದಬಿಂದುಗಳೆಂಬ ಮಂತ್ರ ಪುಷ್ಪ ಚೆಲ್ಲಿಚೆದುರೆಯರು ಮಂಗಳಾರತಿ ಬೆಳಗುತಿಲ್ಲಿಸದಮಳೆ ನೀ ಮಲಗು ಯೋಗ ನಿದ್ರೆಯಲಿಚಿದಾನಂದ ತಾನಾದ ಬಗಳಾಂಬೆ ಸುಖದಲಿ 8
--------------
ಚಿದಾನಂದ ಅವಧೂತರು
ಜೋ ಜೋ ಜೋ ಜೋ ಎನ್ನಿ ನಿರ್ವಿಕಾರಗೆಜೋ ಎಂದು ತೂಗಿರಿ ಚಿದಾನಂದ ದೊರೆಗೆ ಪ ಚಿದ್ಬಯಲಿನೊಳು ಹೃದಯ ತೊಟ್ಟಿಲ ಮಾಡಿಬದ್ಧ ವೇದಾಂತದ ನೇಣ ಬಿಗಿದುಸದ್ಭಾವವೆಂಬ ಹಾಸಿಗೆಯ ಹಾಸಿಶುದ್ಧಾತ್ಮನನು ಭಾವದಿ ತಂದು ನೀಡಿ 1 ಅದ್ವೈತವೆಂಬ ಆಭರಣ ತೊಡಿಸಿಸಿದ್ಧ ಭೂಮಿಕೆ ಎಂಬ ಅಡವನಿಡಿಸಿಬುದ್ಧಿ ನಿರ್ಮಳವಾದ ತಲೆದಿಂಬನಿಡಿಸಿನಿದ್ದೆ ಮಾಡೋ ಬ್ರಹ್ಮಾನಂದ ಬೋಧದಲಿ 2 ಚಿತ್ಪ್ರಭೆಯ ದೀಪವನು ಎಡಬಲದಿ ಹಚ್ಚಿಮೊತ್ತವಹ ದಶನಾದ ಭೇರಿಯರವ ಹಚ್ಚಿಮತ್ತೆ ಓಂಕಾರ ಮಂತ್ರ ಘೋಷದಿ ಮುಚ್ಚಿನಿತ್ಯಾತ್ಮನನು ನೋಡಿ ಹರುಷ ತುಂಬುತಲಿ 3 ವಸ್ತು ಸಾಕ್ಷಾತ್ತೆಂಬ ಮುತ್ತೈದೆಯರೆಲ್ಲಸ್ವಸ್ಥ ಚಿತ್ತೆಂಬುದನೆ ಸಿಂಗರಿಸಿಕೊಂಡುನಿಸ್ಸಂಗನಹ ಆತ್ಮ ಶಿಶುವನೊಡತಂದುಸುಸ್ವರದ ನಾದದಲಿ ಜೋಗುಳವ ಪಾಡುತಲಿ 4 ಜೋ ಜೋ ಕಾಮಸ್ತಂಭವ ಎನ್ನಿ ನರರೆಲ್ಲಜೋ ಜೋ ಕ್ರೋಧ ಸ್ತಂಭನ ಎನ್ನಿ ನರರೆಲ್ಲಜೋ ಜೋ ಮೋಹ ಸ್ತಂಭನ ಎನ್ನಿ ನರರೆಲ್ಲಜೋ ಜೋ ವಿಷಯ ಸ್ತಂಭನ ಎನ್ನಿ ನರರೆಲ್ಲ5 ಜೋ ಜೋ ಯಮನಿಯಮಾಸನ ಅರುಹಿದವನೆಜೋ ಜೋ ಜೋ ಜೋ ಖೇಚರ ಮುದ್ರೆ ನಿಲಿಸಿದವನೆಜೋ ಜೋ ಜೋ ಜೋ ಅವಿದ್ಯೆ ಖಂಡಿಸಿದವನೆಜೋ ಜೋ ಜೋ ಜೋ ಜೀವನ್ಮುಕ್ತಿದಾತನೆ 6 ಜೋ ಜೋ ಪರಮಾರೂಢನೆ ಪರಮೇಶಜೋ ಜೋ ಪರಮ ಪರೇಶನೆ ಪಂಡಿತಜೋ ಜೋ ನಿರುತ ವಸ್ತು ವ್ಯಕ್ತ ಅವ್ಯಕ್ತಜೋ ಜೋ ಶರಣ ರಕ್ಷಕ ರಾಜ ಯೋಗೀಂದ್ರ ಜೋ ಜೋ 7 ಸತ್ಯ ಸನಾಥ ವಿಶ್ವೋತ್ಪತ್ತಿ ಜೋ ಜೋಪ್ರತ್ಯಗಾತುಮ ಪರಬ್ರಹ್ಮನೆ ಜೋ ಜೋನಿತ್ಯ ಸಹಜಾನಂದ ಚಿನ್ಮಾತೃ ಜೋ ಜೋಭಕ್ತರ ಭಂಡಾರಿ ಭಾಗ್ಯನೆ ಜೋ ಜೋ 8 ಮಿಹಿರ ಶತಕಳೆಯೆಂಬ ಮಂತ್ರಪುಷ್ಪವ ಚೆಲ್ಲಿಮಹಾ ಬೆಳಕಿನ ಮಂಗಳಾರತಿಯ ಬೆಳಗುತಲ್ಲಿಅಚಲ ಸಮಾಧಿಯೆ ಆದ ಯೋಗನಿದ್ರೆಯಲಿಮಹಾ ಚಿದಾನಂದಾವಧೂತ ಮಲಗಿರು ಸುಖದಲ್ಲಿ 9
--------------
ಚಿದಾನಂದ ಅವಧೂತರು
ಹರಿಪಾದವ ನಂಬಿರೋ | ಮನುಜರೆಲ್ಲ | ಹರಿಯಲ್ತೆ ಹರಿಗರ್ವ ಹರಿಸಿ ಗೋಕುಲದೀ | ವಿ | ಹರಿಸಿ ಹರಿಜಳಲ್ಲಿ ಹರಿಮೆಟ್ಟಿನಲಿವಂಥ ಪ ಸೋಮಜ ಭವನ ಪದಾ | ಸೇವೆಗೆ ಮೆಚ್ಚಿ | ಸೋಮ ಪುತ್ರಗೆ ನೀಡಿದಾ | ಸೋಮನಾ ಭಂಡಾರಿಯನೆ ಮಾಡಿ ದಯದಿಂದ | ಸೋಮಜಾನನಾ ಪೂರ್ಣ ಸೋಮಚಕೋರವಾ 1 ಕಮಲಾರಿ ಧರ ಸೇವ್ಯನು | ಶಂಖ ಚಕ್ರ | ಕಮಲಾಗದಾಧರನು | ಕಮಲಾಂಘ್ರೀಯನಖ ಕಮಲದಿ ಜನಿಸಿದಾ | ಕಮಲದಿ ಮೂಜಗ ಕಮಲಗತಿಯ ನೀವ 2 ಗೋಪೆಸರನ ಪಿತನ | ಉದ್ಧರಿಸಲು | ಗೋಪಾದ ತ್ರಯ ಕೃತನ | ಗೋಪಾದಿವಿನುತ ಮಹಿಪತಿಸುತ ಪ್ರಭು | ಗೋಪಕೋಟಿ ತೇಜ ಗೋಪಾಲ ನೆನಿಸುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು