ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರು ಮರೆಯದಿರು ಹರಿಯನು ಪಾಪಿ ಪ ಮರೆಯದಿರೆ ನೀ ಮೈಕುಂಠಕೆ ಪೋಪಿಅ.ಪ. ಮೂರು ದಿನ ಬಾಳ್ವ ಸಂಸಾರವ ನೋಡಿ ಬಾರಿ ಹರುಷಿಸದಿರು ನೀನೆಲೊ ಖೋಡಿ 1 ಮತಿವಂತನಾದರೆ ಹರಿಪುರಕೆ ಪೋದಿ ಸತಿಸುತರ ನಂಬೆ ನಿನ ಬಾಯಲಿ ಬೂದಿ 2 ಸಿರಿಯ ನಂಬಿದ ದುರ್ಯೋಧನ ಬಿದ್ದ ಹರಿಯ ನಂಬಿದ ಭೀಮಸೇನನು ಗೆದ್ದ 3 ಆನೆ ಕುದುರೆ ರಥ ಭಂಡಾರವು ನಿಂದೆ ಪ್ರಾಣ ಹೋಗುವಾಗವು ಬಾರವು ಹಿಂದೆ 4 ರಂಗೇಶವಿಠಲನ ನಂಬಿದವ ಜಾಣ ಅಂಗನೆಯರ ನಂಬಿದ ಮನುಜನೆ ಕೋಣ 5
--------------
ರಂಗೇಶವಿಠಲದಾಸರು
ಲೊಳಲೊಟ್ಟೆ - ಬದುಕು - ಲೊಳಲೊಟ್ಟೆ ಪ.ಆನೆ ಕುದುರೆ ಮಂದಿ ಲೊಳಲೊಟ್ಟೆ - ಬಲು |ಸೈನ್ಯ ಭಂಡಾರವು ಲೊಳಲೊಟ್ಟೆ ||ಮಾನನಿಯರ ಸಂಗ ಲೊಳಲೊಟ್ಟೆ - ಮಹಾ |ಮಾನ್ಯ - ವಿಜಯರೆಲ್ಲ ಲೊಳಲೊಟ್ಟೆ 1ಮುತ್ತು - ಮಾಣಿಕ - ಚಿನ್ನ ಲೊಳಲೊಟ್ಟೆ - ಬಲು |ಛತ್ರ - ಚಾಮರಗಳು ಲೊಳಲೊಟ್ಟೆ ||ಸುತ್ತಗಳು ಕೋಟೆಯು ಲೊಳಲೊಟ್ಟೆ - ಅಲ್ಲಿ |ಸುತ್ತುವ ಜನವೆಲ್ಲ ಲೊಳಲೊಟ್ಟೆ 2ನೆಂಟರು - ಇಷ್ಟರು ಲೊಳಲೊಟ್ಟೆ - ದೊಡ್ಡ |ಕಂಟಕಾನಾಹೊದು ಲೊಳಲೊಟ್ಟೆ ||ಉಂಟಾದ ಗುಣನಿಧಿ ಪುರಂದರವಿಠಲನ |ಬಂಟನಾಗದವ ಲೊಳಲೊಟ್ಟೆ 3
--------------
ಪುರಂದರದಾಸರು