ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಂಡನಾದೆ ಸಂಸಾರಕೊಂಡದೊಳಗೆ ಬಿದ್ದು ಕಂಡುಕಾಣದಂತಿರುವರೇ ಪುಂಡರೀಕನಯನ ಪ ಅಶÀನ ವಸನಕ್ಕಾಗಿ ದೆಸೆಗೆಟ್ಟು ಬಾಯ್ಬಿಡುತ ಅಸುವ ಕರದೊಳ್ಪಿಡಿದು ವಸುಧೆಯ ಜನರ ಬಸವಳಿದು ಬೇಡಲು ಕಣ್ಣೆಸಿದು ಬೈಯಲು ತಲೆಬಾ ಗಿಸಿಕೊಂಡು ನಿಂದೆ ಹರಿ ಉಸುರಲಳವಲ್ಲ 1 ರೊಕ್ಕದ ಆಸೆಗಾಗಿಕ್ಕೆಲದ ಜನರನ್ನು ತರ್ಕಿಸದೆ ದೈನ್ಯದಿಂ ಚಿಕ್ಕಮಗ ನಾ ಎನುತ ಫಕ್ಕನೆ ಕೈತಾಳನಿಕ್ಕುವರು ನಗಲು ಮಹ ದು:ಖದಿಂ ತಿರುಗಿದೆನು ಬಿಕ್ಕಿಬಿಕ್ಕಳುತ 2 ಯರ ಮೋಹಿಸಿ ದಂಡಿಸಿದೆ ಮನೆಸತಿಯ ಕಂಡವರು ತಿದ್ದಿದರು ಚಂಡಿತನವಿಡದೆ ಕಂಡವರ ಅರ್ಥವನು ಮನೆಸೇರಿಸಿ ಬಂಡೆದ್ದು ಜನರೊಳಗೆ ಮಂಡೆಯೆತ್ತದೆಹೋದೆ 3 ತಪದಿಂದ ಹರಿಪಾದ ಜಪಿಸುವುದ ಮರೆದು ನಾ ಕೃಪಣತ್ವಜನಸೇವೆ ಅಪರೂಪಗೈದೆ ಚಪಲತ್ವತನದಿಂದ ಅಪಹರಿಸಿ ಪರರರ್ಥ ಸುಪಥಕ್ಕೆ ದೂರಾಗಿ ಅಪರಾಧಿಯಾದೆ4 ಕದ್ದು ತಿಂದೆ ನೆರಹೊರೆಯ ಬಿದ್ದೆ ದುರ್ಬವಣೆಯೊಳು ಬದ್ಧನಾಗಿ ಧರೆಮೇಲೆ ಹದ್ದಿನಂತೆ ಬಾಳ್ದೆ ತಿದ್ದಿ ನೀ ಎನ್ನ ತಪ್ಪುಬುದ್ಧಿಯನು ಕಲಿಸೆನ್ನೊ ಳಿದ್ದು ಪೊರೆ ದಯದಿಂದ ಮುದ್ದು ಶ್ರೀರಾಮ 5
--------------
ರಾಮದಾಸರು
ಏನು ಗತಿಯೊ ರಂಗ ನಾ ನಿನ್ನವನಾಗಿಜ್ಞಾನದಂತಿರಲಿಲ್ಲವೊ ಪ.ಉಂಡುಂಡುತುಡುಗಕೋಣನಪರಿಸೊಕ್ಕಿದೆಕಂಡಲ್ಲಿ ಕುಳಿತೆ ನೊಣನ ತೆರದಿಭಂಡು ಭೂತದ ಮಾತನಾಡಿ ಭಂಡನಾದೆಪುಂಡರೀಕಾಕ್ಷನನ್ನಂಥ ಪಾತಕಿಗೆ1ಬಲು ಶಾಸ್ತ್ರಶ್ರವಣೆಂಬುವ ಮಳೆಗರೆದರೇನುಕಲುಗುಂಡಿನಂತೆ ಕೆಟ್ಟೆದೆ ತೊಯ್ಯದುಹಲವು ಅಧ್ಯಾತ್ಮವನುಸುರೇನು ಚಿತ್ತದಕಳವಳಿ ನಿಲಿಸಲಾರದ ಪಾಮರಗೆ 2ಭವಸುಖ ಉಂಬಾಗ ನೋವು ಬೇವಾದಾಗತವಕದಿ ನುಡಿವಾಗ ಕನಸಿನಾಗಅವಿರಳಅಚ್ಯುತನಿನ್ನಂಘ್ರಿ ನೆನೆದೀಶಅವಸರಕೊದಗೆಂದೆ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ಭಂಡನಾದೆನು ನಾನು ಸಂಸಾರದಿ |ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ಪಕಂಡ ಕಲ್ಲುಗಳಿಂಗೆ ಕೈಮುಗಿದು ಸಾಕಾದೆ |ದಿಂಢೆಗಾರರ ಮನೆಗೆ ಬಲು ತಿರುಗಿದೆ ||ಶುಂಡಾಲನಂತೆನ್ನ ಮತಿ ಮಂದವಾಯಿತೈ |ಪುಂಡರೀಕಾಕ್ಷನೀ ಕರುಣಿಸೈ ಬೇಗ1ನಾನಾವ್ರತಂಗಳನು ನಾ ಮಾಡಿ ಬಳಲಿದೆನು |ಏನಾದರೂ ಎನಗೆ ಫಲವಿಲ್ಲವು ||ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ |ನೀನಾದರೂ ಕೃಪೆಯನಿಡು ಬೇಗ ಹರಿಯೇ 2ಬುದ್ಧಿಹೀನರ ಮಾತಕೇಳಿನಾ ಮರುಳಾದೆ |ಶುದ್ಧಿ ಇಲ್ಲದೆ ಮನವು ಕೆಟ್ಟು ಹೋಯ್ತು ||ಮಧ್ವನುತಸಿರಿಪುರಂದರವಿಠಲ ತತ್ವದ |ಸಿದ್ಧಿಯನು ದಯೆಗೆಯ್ದು ಉಳುಹು ನೀ ಎನ್ನ 3
--------------
ಪುರಂದರದಾಸರು