ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ಆತ್ಮನಿವೇದನೆ ನೋಡದೆ ತ್ವರದಿ ಪ ಹೆಂಡತಿ ಮಕ್ಕಳ ಭ್ರಾಂತಿಯೊಳನ್ಯರ ದಂಡಿಸಿ ಧನವ ಹರಿಸಿದೆನೋ ಭಂಡತನದಲಿ ಪ್ರಚಂಡನಾದೆನೋ ಹರಿ ಪುಂಡರೀಕಾಕ್ಷನೇ 1 ನಾ ದಿನಗಳೆದೆ ಹೇ ಮಹಾಭಾವನೇ ಪಾಮರನಾದೆ ಎನ್ನ ನೀ ಮಮತೆಯಿಂದಲಿ 2 ಅಟ್ಟಮೇಲೆ ಒಲೆ ನೆಟ್ಟಗುರಿವಂದದಿ ಕೆಟ್ಟ ಮೇಲೆಚ್ಚರ ಹುಟ್ಟಿತೆನಗೆ ನೀ ದಯದಿ 3
--------------
ಹನುಮೇಶವಿಠಲ
ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲಏನು ಹೇಳಿದರೇನು ವಿಷಯಮೆಚ್ಚಿದವಗೆ ಪ. ಕಂಡಕಂಡವರ ಅನ್ನಕೆ ಸಿಲುಕಿ ಅನುಗಾಲಭಂಡತನದಲಿ ಕಾಲವ ಕಳೆಯುತತಂಡ ತಂಡದಿ ಬಾಹ ಔತಣಕೆ ಮೈಯ್ಯುಬ್ಬಿಉಂಡು ಎನಗಿಂದಧಿಕ ಯೋಗ್ಯನಿಲ್ಲವೆಂದು 1 ಪರ್ವಕಾಲ ಪಿತೃದಿವ್ಸ ಗುರುಗÀಳ ಪುಣ್ಯದಿನಸರ್ವಕರ್ಮವ ತ್ಯಜಿಸಿ ಅತಿಥಿಗೀಯದೆಪರರ ಅನ್ನವ ಬಿಡದೆ ಉತ್ಸಾಹದಲಿ ಪೋಗಿನಲಿನಲಿದುಂಡು ಸ್ತೋತ್ರವ ಮಾಡಿ ದಿನಕಳೆವೆ 2 ಅನ್ಯರೊಡವೆಯು ತನಗೆ ಬಂದರೆ ಸಂತೋಷತನ್ನೊಡವೆ ಒಬ್ಬರಿಗೆ ಕೊಡಲು ಕ್ಲೇಶಉನ್ಮತ್ತನಾಗಿ ಉದರವ ಪೊರೆವ ಈ ದೋಷಮನ್ನಿಸಿ ದಯಮಾಡಿ ಸಲಹೋ ಹಯವದನ3
--------------
ವಾದಿರಾಜ
ಹ್ಯಾಂಗೆ ನೀ ದಾಸನಾದೆ ಪ್ರಾಣಿ ಪ ಭವ ಭಂಗವ ಪಡುವವನು ಅ ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು 1 ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ 2 ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ3 ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ4 ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು 5 ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು ಪಾಮರ ಪ್ರಾಣಿ6 ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ತಟ್ಟಿಶ್ರೀಲೋಲನ ಗುಣ ಪೊಗಳಿ ನಟಿಸದಲೆ 7 ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆಅಣಿಮಾದಿ ಅಷ್ಟಸಿದ್ಧಿಯನು ಕೈಗೊಳ್ಳದಲೆ 8 ಭಾಗವತ ಕೇಳದೆ 9 ಕಟ್ಟಿ ಕೈ ಪರರಲಿ ಹೊಟ್ಟೆಗೋಸುಗವೆ ಕಂ-ಗೆಟ್ಟು ಯಾಚಿಸುವ ಭ್ರಷ್ಟಪ್ರಾಣಿಯೆ ನೀನು 10 ನೇಮದಿ ಉಪವಾಸ ಆ ಮಹಾ ಏಕಾದಶಿಕಾಮಜನಕನನು ಪ್ರೇಮದಿ ಸ್ಮರಿಸಿದೆ11 ಏಸುದಿನ ಬದುಕಿದರು ಸೂಸುವ ಪಾಪವಈಸಿ ದಾಟದೆ ಕಾಸುವೀಸಕೆ ಬಾಳಿದವ 12 ಮೂರ್ತಿ ಪಾದಂಗಳ ಮನದಲಿ ಹಿಂಗದೆ ಭಜಿಸದೆ 13 ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆಅತ್ತರೆ ಬಹುದೇನೊ ಉತ್ತಮ ಫಲ ಸೂಸಿ14 ಆಡುವ ಮಕ್ಕಳ ಕೈಗೆ ನೀಡದೆ ಕಡಲೆಯಬೇಡಿದರೆ ಕೊಟ್ಟು ಕೂಡಿ ಆಡದವನು ನೀ 15 ಶೃಂಗಾರ ಬಯಸುತ ಬಂಗಾರದೊಡವೆಯಹಿಂಗದೆ ಶ್ರೀ ತುಲಸಿಯ ರಂಗಗರ್ಪಿಸದೆ 16 ಸುತ್ತ ಕತ್ತಲೆ ಚಿಂತೆ ಮತ್ತೆ ಭಯದ ಭ್ರಾಂತಿಚಿತ್ತಜನಯ್ಯನು ದೊರೆವ ಬಗೆ ಕಾಣದೆ 17 ಡಂಬವ ಮಾಡಿಕೊಂಡು ತುಂಬ ಪಾಪ ಒಳಗೆಹಂಬಲಿಸಿದರಿನ್ನು ಬೆಂಬಲಕಾರುಂಟು 18 ದುಂಡು ನಾಮವ ಬಳಿದು ಭಂಡತನದಲಿ ಜಗದಿದಂಡಿಗೆ ಬೆತ್ತ ಪಿಡಿದು ಹೆಂಡಿರ ಕಾಯ್ವನೆ 19 ಹಕ್ಕಿವಾಹನನ ಗುಣ ಲೆಕ್ಕಿಸಿ ಪೊಗಳದೆಬೆಕ್ಕಸ ಬೆರಗಾಗಿ ಅಕ್ಕಿಗೆ ತಿರುಗುವವ 20 ಪಾದ ರಾಗದಿ ಭಜಿಸದೆಕಾಗಿನೆಲೆಯಾದಿಕೇಶವರಾಯನೆನದೆ21
--------------
ಕನಕದಾಸ
ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು