ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ನಾ ಬೀರಲ್ಯಾ ಪ ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ. ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ ತನಯನಗಿದ್ದುದ ಹೇಳಲ್ಯಾ ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1 ದನುಜ ಭಂಜನನಾದ ‌ಘನ ಮಹಿಮನೆ ಮಾಗ ಧನಿಗಂಜಿ ಓಡಿದ್ದು ಹೇಳಲ್ಯಾ ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ ಅನುಗನಾಗಿದ್ದದ್ದು ಹೇಳಲ್ಯಾ ನಾನು 2 ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ ಮಿತವಾಗಿ ಕದ್ದದ್ದು ಹೇಳಲ್ಯಾ ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ ಸತಿಯರ ಕೂಡಿದ್ದು ಹೇಳಲ್ಯಾ ನಾನು 3 ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ ಸತಿಗೊಶನಾದದ್ದು ಹೇಳಲ್ಯಾ ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4 ಭೂತಳದೊಳು ದೇವತೆಗಳೊಡÀನೆ ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ ಭೀತಿರಹಿತ ಜಗನ್ನಾಥವಿಠ್ಠಲನೆ ಅ ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
--------------
ಜಗನ್ನಾಥದಾಸರು
ಪಿಡಿಯಿರಿ ಪಿಡಿಯಿರಿ ಹರಿ ಚರಣವನು ಪಡೆಯಿರಿ ಪಡೆಯಿರಿ ಹರಿ ಕರುಣವನು ಪ ಸ್ಮರಶರ ಬಾಧೆಗೆ ಸಿಲುಕದೆ ಜನರೇ ಭರದಲಿ ಶ್ರೀ ಹರಿ ಸೇವೆಯನು ನಿರುತವು ಗೈಯುತ ಕೇಶವನಾಮವ ಹರುಷದಿ ಸ್ಮರಿಸುತ ಭಜಿಸುತಲೀ 1 ದನುಜ ಭಂಜನನಾದ ಕೇಶವ ಸೇವೆಯ ತನು ಮನ ಧನದಿಂದ ಗೈಯುತಲೀ ಅನುದಿನ ಶ್ರೀ ಹರಿ ಕೀರ್ತನೆ ಮಾಡುತ ಮನುಜ ರಂಜನನನ್ನು ಸವಿಸುತಲೀ 2 ಸುಜನರ ಪಾವನ ಶರಣರ ತಾತನ ಕುಜನರ ಕಾಲನ ಆದರದೀ ಭಜನೆಯ ಮಾಡುತ ದೂರ್ವಾಪುರವನು ಸ್ರಜಸಿದ ಕೇಶವನೂ 3
--------------
ಕರ್ಕಿ ಕೇಶವದಾಸ
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ