ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಯ್ಯ ಭಾಗಣ್ಣನೇ | ಯನ್ನಯ ಮನಕೆ ಬಾರಯ್ಯ ಭಾಗಣ್ಣನೆಕರೆ ಕರೆ ಮನದ ವಿಷಾದವ ಕಳೆದು ಶ್ರೀಹರಿಯಲಿ ಮನವಿತ್ತು ಕರುಣಿಪುದಯ್ಯ ಅ.ಪ. ಗೋಪಾಲ ವಿಠಲನ ಭಜಕನೇ | ಹೇ ಉಮಾಪತಿಸುತ ಬಲುತ್ಯಾಗ ಶೀಲನೆ |ಶಾಪದಿ ನೊಂದ ಶ್ರೀನಿವಾಸಪ್ಪಗೆಆಪಾರಾಯುಷ್ಯವಿತ್ತು ಸಲಹೀದ 1 ತಡವು ಇನ್ಯಾತಕಯ್ಯಾ | ಗುರುಮಡದಿಯ ಸಲಹಿದ ಹರಿಯಾ |ಒಡಲೊಳು ತೋರಿಸಿ ಸಲಹೆಂದು ಬೇಡುವೆಕಡು ದಯಾನಿಧೆ ಅಡಿಗೆರುಗುವೆನಯ್ಯಾ 2 ಸಕಲ ಶಾಸ್ತ್ರದಿ ಬಲು ನಿಪುಣಾ | ಮಂತ್ರಸಕಲವ ಚಕ್ರದಿ ರಚಿಸಿದ ಧಿಷಣಾ |ಲಕುಮಿಯರಸ ಗುರು ಗೋವಿಂದ ವಿಠಲನೆಸಕಲಕ್ಕು ದೇವನೆಂದರುಹಿದ ಗುರುವೇ 3
--------------
ಗುರುಗೋವಿಂದವಿಠಲರು
ಮರೆಯುವರಾರೆ ಶ್ರೀ ಮುರಳೀಧರನ ಕಂಡು ವರವ ಬೇಡದವರಾರೆ ಪಡೆಯದವರಾರೆ ಪ ಮುರಳೀದನಿಯ ಕೇಳಿ ಪರಿದೋಡದವರಾರೆ ಅವನೆಡೆ [ಪರಮಸುಖ] ಪಡೆಯದವರಾರೆ ಅ.ಪ ಕಂಜನಾಭನು ಬಂದು ಪುಂಚವನದಿ ನಿಂದು ಮಂಜುಳಗಾನವ ಮಾಡುತಿರೆ ಅಂಜುವರೇನೆ ನಿರಂಜನನವ ಪಾಪ ಭಂಜಕನೇ ತಂಗಿ ಹೋಗೋಣ ಬಾರೆ 1 ಮಂಗಳಮೂರ್ತಿ ಮಾತಂಗವರದ ಭವ ಭಂಗನ ಚರಣವ ನೋಡುವ ಬಾರೆ ಮಂಗಳ ಜಯ ಜಯ ಮಂಗಳ ಮಾಂಗಿರಿ ರಂಗಗೆ ಶುಭವೆಂದು ಪಾಡುವ ಬಾರೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್