ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ಇನ್ನೇತರೊಳಗಾಸೆ ಎನಗಿಲ್ಲವೋ ಈಗಳಿನ್ನು ಹರಿನಾಮ ಸಂಕೀರ್ತನೆಯೊಂದು ಹೊರತಾಗಿ ಪ ನೋಡಿ ಸಾಕಾಯ್ತು ಲೋಕದ ಪ್ರಪಂಚವನು ಪೇ ಚಾಡಿ ಸಾಕಾಯ್ತು ದರಮಂ ಪೊರೆಯಲು ಆಡಿ ಸಾಕಾಯ್ತು ಸುಜನರೊಳ ನೃತಗಳನು ಒಡ ನಾಡಿ ಸಾಕಾಯ್ತು ಕುಜನರ ಸಂಗದೊಳಗೆ 1 ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು ನಾ ಕಂಡು ಸಾಕಾಯ್ತು ಸುಜನರ ಭಂಗವನು ತಂಡಿ ಸಾಕಾಯ್ತು ಪರಸೇವೆಯನು ಮಾಡಿ ಜನ ರಂಡಲೆದು ಬೇಡಿ ಸಾಕಾಯ್ತು ಈ ಭವಕೆ 2 ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ ಪರಿ ಪರಿಯ ದುಃಖಗಳನುಣ್ಣುತ ಚರಿಸಿದೆನು ಮರುತಸುತ ಕೋಣೆ ಲಕ್ಷ್ಮೀರಮಣ ಇರಿಸಿದಂತಿರ ಬೇಕು ಸಕಲಜನರು 3
--------------
ಕವಿ ಪರಮದೇವದಾಸರು
ಬೇಡವೀಗ ಬಾಲೆ ಸಂಗ ಕೆಟ್ಟುಹೋಗುವೆ ಇದುಪಾಡಲ್ಲ ಭಂಗವನು ಅನುಭವಿಸುತಕಾಡ ಹಿಡಿಯುವೇ ಹುಟ್ಟುಗೆಡುವೆಯಲ್ಲೊ ಪ ಸತ್ಯವದು ನಾರಿದೋಷ ಮೃತ್ಯುವಲ್ಲೋ ಯಮನಿತ್ಯದಲಿ ಎತ್ತಿರುವ ಕತ್ತಿಯಲ್ಲೋ ಆತ್ಮ-ಹತ್ಯವಲ್ಲೋ ಅಪಥ್ಯವಲ್ಲೋ 1 ಸರಕು ಎಲ್ಲೋ 2 ಶಿಷ್ಟಾಶಿಷ್ಟರೆಂಬವರು ಕೆಟ್ಟರಲ್ಲೋ ಬಲುಗಟ್ಟಿ ತವಸಿಗಳು ಮತಿಗೆಟ್ಟರಲ್ಲೊ ಕಂ-ಗೆಟ್ಟರಲ್ಲೋ ಘಾಸಿಪಟ್ಟರಲ್ಲೋ 3 ಧಾರಣೆಯು ಧ್ಯಾನಮೌನ ಹಾರಿತೆಲ್ಲೋ ಕಾಮಕೂರ್ಗಣೆಗಳು ಮೊನೆದೋರಿತಲ್ಲೋ ಮನೆಹಾರಿತಲ್ಲೋ ಧೈರ್ಯತೂರಿತೆಲ್ಲೋ 4 ನಾರಿಯವಳು ನಿನ್ನ ಗತಿಗೆ ಮಾರಿಯಲ್ಲೋ ಗುರುವೀರ ಚಿದಾನಂದನನ್ನು ಸೇರು ಎಲ್ಲೋಪರಿಹಾರವೆಲ್ಲೊಲ್ಲೋ ಮುಕ್ತಿ ಸಾರೆ ಎಲ್ಲೋ 5
--------------
ಚಿದಾನಂದ ಅವಧೂತರು
ಮಲಗಲೇತಕೆ ಹರಿಯೆ | ಚಲುವ ಚನ್ನಿಗ ದೊರೆಯೆ ಪ ಎಲರುಣೀವರ ಶಯ್ಯ | ಬಳಲಿಕೇಕಯ್ಯಾ ಅ.ಪ. ವೇದ ಕದ್ದನ ಹರನೆ | ಭೂಧಾರಿ ಗಿರಿಧರನೆಭೂದರಿಸಿ ಭೊಮ್ಮನಿಗೆ | ಆದರದಿ ಕೊಟ್ಟವನೇ |ಭಾದಿಸೇ ಭಕ್ತ ಪ್ರ | ಹ್ಲಾದನನ ಕಾಯ್ದವನೆಮೋದದಿಂದಲಿ ಬಲಿಯ | ಪಾದವಾ ಮೆಟ್ಟಿದನೆ 1 ಗಂಡು ಗೊಡಲಿಯ ಪಿಡಿದು | ಭಂಡ ಭೂಭುಜ ತರಿದುಲಂಡ ರಾವಣ ಶಿರ | ಚೆಂಡಾಡಿದ ಧೊರೆಯೇಕಂಡ ಕಂಡವರ ಮನೆ | ಗಂಡಲೆದು ಪಾಲ್ಮೊಸರಉಂಡುಂಡು ಚೆಲ್ಲಾಡಿ | ಭಂಡು ಮಾಡಿದೆ ಕೃಷ್ಣ 2 ಮುಪ್ಪೊರರ ಸತಿಯರನು | ಅಪ್ಪಿ ವ್ರತ ಭಂಗವನುತಪ್ಪದೇ ಮಾಡಿ ಹಯ | ವಪ್ಪಿ ಏರ್ದವನೇಇಪ್ಪರಿಯ ಚರ್ಯ ದಿಂ | ಸೊಪ್ಪಾಗಿ ಮಲಗಿದೆಯೋಗುಪ್ತ ಮಹಿಮನೆ ದೇವ | ಅವ್ವ ಶ್ರೀರಂಗ ಪುರಗ 3 ಕ್ಲೇಶ 4 ಪೂರ್ವ ವಾಹಿನಿ ಎನಿಪ | ಕಾವೇರಿ ತೀರಗನೆಪೂರ್ವದಿವಿಜರ ಹರನೆ | ಸಾರ್ವಭೌಮಾಊರ್ವಿ ಯೊಳ್ಪೆಸರಾದ | ಪಾರ್ವ ಗೌತಮ ವರದಕೋರ್ವೆ ತವ ಚರಣ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಾಕು ಸಾಕಿನ್ನು ಸಂಸಾರಸುಖವು |ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪಉದಿಸಿದುವು ಪಂಚಭೂತಗಳಿಂದ ಔಷಧಿಗ-|ಳುದಿಸಿದುವು ಔಷಧಿಗಳಿಂದನ್ನವು ||ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |ಪತನವಾದಿಂದ್ರಿಯವು ಹೊಲೆ-ರುಧಿರವು ||ಸುದತಿಯುದರದೊಳೆರಡು ಏಕದಲಿ ಸಂಧಿಸಲು |ಬುದಬುದನೆ ಮಾಸಪರ್ಯಂತರದಿ ಹರಿಯೆ 2ಮಾಸವೆರಡರಲಿ ಶಿರಮಾಸಮೂರರಲಂಗ |ಮಾಸನಾಲ್ಕರಲಿ ಚರ್ಮದ ಹೊದಿಕೆಯು ||ಮಾಸವೈದರೊಳುನಖರೋಮ ನವ ರಂಧ್ರಗಳು |ಮಾಸವೇಳಲಿ ಧಾತು ಹಸಿವು ತೃಷೆಯು 3ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |ಭಂಗವನು ಪಡಲಾರೆ ಭವಭವದೊಳು ||ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4ಇನಿತು ಗರ್ಭದೊಳು ನವಮಾಸ ಪರಿಯಂತರದಿ |ತನು ಸಿಲುಕಿ ನರಕದಲಿ ಆಯಾಸಗೊಂಡು ||ಘನಮರುತವೇಗದಿಂ ಅರುಹನಲ್ಲಿಯೆ ಮರೆತುಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |ಪರವಶದೊಳಿರಲು ನೀರಡಿಸಲಾಗ ||ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |ದುರಿತರೂಪದ ತನುವ ಧರಿಸಿದೆನೊ ಹರಿಯೆ 6ಶಿಶುತನದೊಳಿರಲು ನೊಣ ಮುಸುಕಲಂದದಕಳಲು |ಹಸಿದನಿವನೆಂದು ಹಾಲನೆ ಎರೆವರು ||ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |ಪಶುವಂತೆ ಶಿಶುತನದೊಳಿರಲಾರೆ ಹರಿಯೆ 7ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |ನುಡಿಯಲರಿಯದ ದುಃಖ ವಿಷಮದಿಂದ ||ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ 8ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |ಗೋಳಿಡುತವಿದ್ಯೆಕರ್ಮಗಳ ಕಲಿತು ||ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾಬಾಲೆಯರ ಬಯಸಿ ಬಹು ಮರಳಾದೆ ಹರಿಯೆ | 9ಜ್ವರದ ಮೇಲತಿಸಾರ ಬಂದಂತೆ ಯೌವನದಿ |ತರುಣಿಯೊಡನಾಡಿಕೂಡಿದವಿಷಯದಿ ||ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |ಹತ್ತು ಇಂದ್ರಿಯದ ಬಹುರೋಗದಿಂದ ||ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |ಕಟ್ಟಿಕಾದಿಹರು ಮುಪ್ಪಡಸಲಾಗ ||ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |ಮುಟ್ಟಿನೋಡರು ಸರಕುಮಾಡರೈ ಹರಿಯೆ 12ಎಷ್ಟವಜೆÕಯ ಮಾಡೆ ಮತ್ತವನಿಗಳಲುತಿರೆ |ಕಟ್ಟಳೆಯ ದಿನತುಂಬಿಮೃತನಾಗಲು ||ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |ಮುಟ್ಟದಲೆ ಹೆಣನೆಂದು ದೂರದೊಳಗಿಹರು 13ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |ಬನ್ನವನು ಪಡಲರೆ ಭವಭವದೊಳು ||ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15
--------------
ಪುರಂದರದಾಸರು