ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕಾಯೊ ಕರುಣದಿ ಕಾಯೊ ಕಮಲನಯನ ಎನ್ನ ಪ ಪರಮಪುರುಷ ಹರೆ ಸರಸಿಜನಾಭನೆ ಅ.ಪ ನೀನೆ ತಂದೆಯು ಎಂದು ಜ್ಞಾನದಿಂದಲಿ ಬಂದು ಧ್ಯಾನಿಸುವೆನು ಈಗ 1 ತಾಯಿ ನೀನೇಯೆಂದು ಬಾಯಿಗೆ ಬಂದಂತೆ ಜೀಯ ನಿನ್ನನು ನೆನೆವೆ 2 ಜಗದೊಳಗೆಲ್ಲ ನೀನೆ ಸುಗುಣ ಶೀಲನು ಎಂದು ಮುಗಿಲು ಮುಟ್ಟುತಲಿದೆ3 ಸಂಗತಶ್ರಮವನು ಭಂಗವಗೈದ ಭು- ಜಂಗ ಗಿರಿಯ ವಾಸ 4 ಲೀಲೆಯಿಂದಲಿ ವ್ಯಾಘ್ರಶೈಲದಲಿರುವ ಶ್ರೀ ಲೋಲ ವರದವಿಠಲ 5
--------------
ವೆಂಕಟವರದಾರ್ಯರು
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್