ಮಾಲೆ ಹಾಕುವೆ ಲೋಲ ಪುರುಷಗೆ ಪ
ಮಲ್ಲ ಮಲ್ಲಿಗೆ ಜಾಜಿ ಸಂಪಗೆಯ ಅ.ಪ
ವ್ಯಾಸಕೋಟ್ ಬನಿಯನ್ ಷರಟು ಜುಬ್ಬಾ
ವೀಷರಾಯಿ ಬೂಡ್ಸನು ಧರಿಸುವಗೆ 1
ಇಂಗ್ಲೀಷು ಬುಕ್ಕನು ಕೈಲಿ ಹಿಡಿದು
ಬಂಗ್ಲೆಯಲಿ ಓದುತ ಕುಳಿತಿರುವಗೆ 2
ಬೈಸ್ಕಲ್ ಮೇಲೆ ಸವಾರಿ ಮಾಡುತ್ತ
ಸೈ ಶಹಭಾಸೆನ್ನಿಸಿಕೊಳ್ಳುವವಗೆ 3
ಮಂದಿಯೊಡನೆ ಮಾತಾಡುತ ನಗುವಗೆ 4
ದ್ವಾಸೆ ಬ್ರೆಡ್ಡುಪ್ಪಿಟ್ಟನು ಭಕ್ಷಿಸಿ
ತಾಸುರ್‍ಸುರಯೆಂದು ಕಾಫಿಯಕುಡಿವಗೆ 5
ದೊಡ್ಡ ದೊಡ್ಡ ಪ್ಯಾಸುಗಳನು ಮಾಡಿ
ಗುಡ್‍ಮ್ಯಾನ್ ದಿಸ್‍ಮ್ಯಾನ್‍ಯೆನ್ನಿಸಿಕೊಳ್ಳುವಗೆ 6
ಗುರುರಾಮವಿಠಲನು ತೋರಿದನಿವರನು
ಹಿರಿಯರ ಪುಣ್ಯವು ಎಷ್ಟೆಂದು ಹೇಳಲಿ 7