ಏನೆಂದುಸುರುವೆ ಈ ನವರಾತ್ರಿಯಾ |
ಸ್ವಾನಂದ ಸುಖಮಯ ಮಹಿಪತಿ ಚರ್ಯಾ ಪ
ಮೊತ್ತ ಜನರು ಕೂಡಿ
ಭಿತ್ತಿ ಬಾಗಿಲುಗಳ ಬಣ್ಣದಿ ನಿಚ್ಚಳ |
ತೆತ್ತ ಮಾಡಳರವಿ ತಳಿಲು ತೋರಣದಿ |
ಮತ್ತೆ ದೇವಾಲಯ ಮಂಡಿತ ಜಗಲಿಯಾ |
ಸುತ್ತ ಕದಳೀ ಕಂಭದಿ ಮ್ಯಾಲಿಯ | ಉತ್ತಮ ಮಂಟಪದಿ
ತರಗು ತೆಂಗು | ಉತ್ತತ್ತೀ ಬಹು ಓಲವೀ ಕಟ್ಟಿಹ |
ವತ್ತೊತ್ತಿ ಥರ ಥರದಿ ನಮ್ಮಯ್ಯಾನಾ 1
ಕಡಲೆ ತಂಡುಲ
ಗುಡ ಶರ್ಕರವ ಮತ್ತೆ ಗೂಡಿಹ ಸಮಸ್ತ |
ಘೃತ ವಡವೆಯ ತುಂಬಿಹ
ಸ್ಟೈಪಾಕ ಮಾಡಲಿ | ತಡೆಯದೆ
ಕೊಡುತಿಹರು ಓಡ್ಯಾಡಲು | ಅಡಿಗಡಿಗೊಬ್ಬೊಬ್ಬರು ಆಜ್ಯವ |
ಧೃಡ ಭಕ್ತಿಯುಳ್ಳವರು ನಮ್ಮಯ್ಯನಾ 2
ಏಕೋ ಭಾವನೆಯಲಿ ಯಾತ್ರೆಯ
ಸದ್ಭೋಧಾಸಕ್ತರು | ಬೇಕಾದಿ
ಸಾಕುವದೇವ ದೇವರಾ ಸಾರಿ
ಸುಜನ ವಿಂಡು |
ಹಾಕಿ ಸಾಷ್ಟಾಂಗದಲಿ
ಪರಿ ಲೋಕ ನೆರೆಯುತಿರಲಿ ನಮ್ಮಯ್ಯನಾ 3
ಮೊದಲಿನ ದಿವಸದಿ
ಸಂಧ್ಯಾವಂದನಜಪಾನುಷ್ಠಾನಾ |
ವಿದಿತ ಬಂಗಾರ ವೆಳಿಯಲಿ ಬರೆದ ಚದುರ |
ಝಗ ಝಗ ಅದು
ನಕ್ಷತ್ರ ಮಾಲಿ ನಮ್ಮಯ್ಯನಾ 4
ಪಡದಿಯ ಸೋಂಪಿಲಿ
ಬಹು ವಿಚಿತ್ರ |
ಸಡಗರದಲಿ ದೇವ ಸಂಪುಟ ಮೆರೆವಾ|
ವಡೆಯನ ಏನೆಂದ್ಹೇಳಲಿ ನಮ್ಮಯ್ಯಾನಾ 5
ಸನ್ನುತ ಗಂಗೆಯ ಸಲಿಲವು
ಮುನ್ನ ಪಂಚಾಮೃತ
ದಾಗಲು ಅಭಿಷೇಕ |
ಸುಗಂಧವನ್ನು ಅರ್ಪಿಸಿ ಚಲ್ವದಾ
ಸಾಲಾದಾ | ಘನ್ನ ದೀಪದೆಡೆ ಬಲದಾ ನಮ್ಮಯ್ಯನಾ 6
ಪರಿಮಳ ದಿಂಡಿಗೆ
ಪರಿ ಪುಷ್ಪದಾ ಪಸರಿಕೆ ಬಹುಳವಾ |
ತರುವಾರಾ ಧೂ
ಬಲವೆಡಾ ಊದುಬತ್ತಿಯ ಗಿಡಾ |
ನೆರೆ ಏಕಾರತಿಯಾಗಲಿ ನೈವೇದ್ಯ ಹರಿವಾಣವನು | ಬರಲಿ
ಹರಿಗೆ ಪ್ರತ್ಯಕ್ಷದಲೀ ನಮ್ಮಯ್ಯನಾ 7
ವಾದಾ ಪೂಗೀ ಫಲಾ
ಹರಿವಾಣ ಆರತಿ ಪೂರಣಾ |
ಛಂದ ಭೇದಿಸಿ ಘನತಾಳಾ ಬಲು
ಶಂಖ ನಾಮ ಘೋಷದಿತಿಂತ |
ರಾದವರು ಪಾಡಲೀ ನೀರಾಂಜನ | ಸಾದಿಪ ಸಮಯದಲಿ
ಕಣ್ಣಿನಲಿ ನಮ್ಮಯ್ಯನಾ 8
ಮೆರೆವ ಷೋಡಷದಿಂದ
ಹರಿತೀರ್ಥಕೊಳ್ಳಲು ಹರುಷದಿ ಜನಗಳು |
ಕರುವೇದ ಘೋಷ ಮಾಡು
ಮಾಡಿ ಕುಳ್ಳಿರೆ | ಪರಮಾನ್ನ
ಪರಿ ಶಾಕಗಳು ಸೂಪಘೃತ |
ಗಿರಿಸಿಹ ದೀಪಗಳು ನಮ್ಮಯ್ಯನಾ 9
ಪ್ರೌಢದಿ ಹರಿ ನಾಮಾ
ಆಡಲೇನದು ತೃಪ್ತಿ ಆಯಿತು ಉಂಡು |
ನೀಡೆ ವೇದೋಕ್ತದ ನುಡಿ
ಆಶೀರ್ವಾದ | ಮಾಡುತ ಬ್ರಾಹ್ಮರು ಮನೆಗೆ ಹೋಗುವರು |
ಗಾಡ ಮದ್ದಲೆ ಸದರು
ಸಭೆಯೊಳುಗೂಡಿ | ಒಡೆಯನಿದಿರು ಹರಿಯ ಕೊಂಡಾಡಿ
ಆರತಿಯತ್ತೀರ ನಮ್ಮಯ್ಯನಾ 10
ಮುಂಚಿಲಿ ನಡೆಯಲು
ಅರ್ಚನೆಯಾ ಅರ್ತಿ |
ಸಂಭ್ರಮದಲಿ ನೋಡಿ
ಸದ್ಗತಿ ಸೂರ್ಯಾಡಿ | ಕೊಂಬರು ಸ್ವಸ್ಥಲ ಕುರಿತು ಆಜ್ಞೆಗಳ |
ಇಂದಿಲ್ಲ ಆನಂದದೀ ಈ ಮಹಿ ಮಾಡಂಬರೆನ್ನ ಮುಖದಿ
ನುಡಿಸಿದ | ಶಂಭು ಮಹಿಪತಿ ದಯದಿ ನಂದನ | ಬೊಂಬಿ
ಸೂತ್ರ ದಂದದಿ ನಮ್ಮಯ್ಯನಾ 11