ಬಾರಯ್ಯ ಬಾರಯ್ಯ ಬಾರೊ ಶ್ರೀ ಹರಿಯೆ
ಬಾರಯ್ಯ ಗುರು ಶಿರೋಮಣಿಯೆ 1
ಮಚ್ಛನಹುದು ಗುರು ಸಚ್ಚಿದಾನಂದನೆ
ಅಚ್ಯುತಾನಂತ ನೀ ಬಾರಯ್ಯ 2
ಕೂರ್ಮನಹುದು ಗುರು ಧರ್ಮ ಸಹಕಾರನೆ
ನಿರ್ಮಳಾನಂದ ನೀ ಬಾರಯ್ಯ 3
ವರಾಹನಹುದು ಗುರು ವಾರಿಜನೇತ್ರನೆ
ವರಮುನಿಹೃದಯ ನೀ ಬಾರಯ್ಯ 4
ನರಸಿಂಹನಹುದು ಗುರು ನರಹರಿಯೆ
ನಾರಾಯಣನೆ ನೀನು ಬಾರಯ್ಯ 5
ವಾಮನಹುದು ನೀ ಬ್ರಾಹ್ಮಣೋತ್ತಮನೆ
ಬ್ರಹ್ಮಾನಂದ ಶ್ರೀ ಗುರು ಬಾರಯ್ಯ 6
ಭಾರ್ಗವರಾಮನಹುದು ಪರಾಕ್ರಮನೆ
ಪರಮಪುರಷ ಗುರು ಬಾರಯ್ಯ 7
ರಾಮನಹುದು ಗುರು ಕಾಮ ನೀ ಪೂರಿತ
ಸಾಮಗಾಯನ ಪ್ರಿಯ ಬಾರಯ್ಯ 8
ಕೃಷ್ಣನಹುದೊ ಗುರುವಿಷ್ಣು ಪರಮಾತ್ಮನೆ
ದೃಷ್ಟ ಮೂರುತಿ ನೀನು ಬಾರಯ್ಯ 9
ಬೌದ್ಧನಹುದು ಗುರು ವೇದಾಂತಮಹಿಮನೆ
ಸಿದ್ಧಶಿಖಾಮಣಿ ಬಾರಯ್ಯ 10
ಕಲಿಕ್ಯವತಾರನಹುದು ಮೂಢನಾತ್ಮನೆ
ಬಾಲಮುಕಂದ ನೀ ಬಾರಯ್ಯ 11