ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಯ್ಯ ಬಾರಯ್ಯ ಬಾರೊ ಶ್ರೀ ಹರಿಯೆ ಬಾರಯ್ಯ ಗುರು ಶಿರೋಮಣಿಯೆ 1 ಮಚ್ಛನಹುದು ಗುರು ಸಚ್ಚಿದಾನಂದನೆ ಅಚ್ಯುತಾನಂತ ನೀ ಬಾರಯ್ಯ 2 ಕೂರ್ಮನಹುದು ಗುರು ಧರ್ಮ ಸಹಕಾರನೆ ನಿರ್ಮಳಾನಂದ ನೀ ಬಾರಯ್ಯ 3 ವರಾಹನಹುದು ಗುರು ವಾರಿಜನೇತ್ರನೆ ವರಮುನಿಹೃದಯ ನೀ ಬಾರಯ್ಯ 4 ನರಸಿಂಹನಹುದು ಗುರು ನರಹರಿಯೆ ನಾರಾಯಣನೆ ನೀನು ಬಾರಯ್ಯ 5 ವಾಮನಹುದು ನೀ ಬ್ರಾಹ್ಮಣೋತ್ತಮನೆ ಬ್ರಹ್ಮಾನಂದ ಶ್ರೀ ಗುರು ಬಾರಯ್ಯ 6 ಭಾರ್ಗವರಾಮನಹುದು ಪರಾಕ್ರಮನೆ ಪರಮಪುರಷ ಗುರು ಬಾರಯ್ಯ 7 ರಾಮನಹುದು ಗುರು ಕಾಮ ನೀ ಪೂರಿತ ಸಾಮಗಾಯನ ಪ್ರಿಯ ಬಾರಯ್ಯ 8 ಕೃಷ್ಣನಹುದೊ ಗುರುವಿಷ್ಣು ಪರಮಾತ್ಮನೆ ದೃಷ್ಟ ಮೂರುತಿ ನೀನು ಬಾರಯ್ಯ 9 ಬೌದ್ಧನಹುದು ಗುರು ವೇದಾಂತಮಹಿಮನೆ ಸಿದ್ಧಶಿಖಾಮಣಿ ಬಾರಯ್ಯ 10 ಕಲಿಕ್ಯವತಾರನಹುದು ಮೂಢನಾತ್ಮನೆ ಬಾಲಮುಕಂದ ನೀ ಬಾರಯ್ಯ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವೋತ್ತಮನ ಪರಮ ಪುರುಷ ಪರಮಾತ್ಮನ ವರ ಶಿರೋಮಣಿ ಪುರುಷೋತ್ತಮನ 1 ಧರೆಯ ಗೆಲಿದ ಮಹಾಶೂರನ ವರವಿತ್ತ ಉಗ್ರಾವತಾರನ 2 ಧರೆಯ ಬೇಡಿದ ಬ್ರಾಹ್ಮಣೋತ್ತಮನ ಪರಶುಪಿಡಿದ ಪರಾಕ್ರಮನ ಸ್ಥಿರ ಪದವಿತ್ತ ದೇವೋತ್ತಮನ ಗಿರಿಯನೆತ್ತಿದ ಮಹಾಮಹಿಮನ 3 ಗುಪಿತ ಪೊಕ್ಕಿದ್ದನ ಅಪರಂಪಾರ ಮಹಿಮಾನಂದನ ಒಪ್ಪುವ ತೇಜಿನೇರಿದ್ದನ ಕಪಟನಾಟಕ ಪ್ರಸಿದ್ಧನ 4 ಭಕ್ತವತ್ಸಲ ಭವನಾಶನ ಮುಕ್ತಿದಾಯಕ ದೇವ ದೇವೇಶನ ಮಹಿಪತಿ ಆತ್ಮ ಪ್ರಾಣೇಶನ ಗುರು ಭಾನುಕೋಟಿ ಪ್ರಕಾಶನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು