ಯಾರಿಗುಸರಲೇನು ದುರಿತಾರಿ ನೀನೆ ರಕ್ಷಿಸು ಕಂ-
ಸಾರಿ ನೀನೆ ರಕ್ಷಿಸು ಮುರಾರಿ ನೀನೆ ರಕ್ಷಿಸು ಪ.
ಭಾರಿ ಭಾರಿ ನಿನ್ನ ಪದವ ಸೇರಿದವರ ಕಾಯ್ದ ದೊರೆಯೆ ಅ.ಪ.
ಪತಿಗಳೈವರಿದಿರೆ ಪತಿವ್ರತೆಯ ಖಳನು ಸೆಳೆಯೆ ಲಕ್ಷ್ಮೀ-
ಪತಿಯೆ ನೀನೆ ಕಾಯ್ದೆಯಲ್ಲದೆ ಗತಿಯದಾರು ತೋರ್ದರಯ್ಯ 1
ಪಿತನ ತೊಡೆಯೊಳಿದ್ದ ಸುತನ ಸತಿಯು ಕಾಲಿನಿಂದೊದೆಯೆ
ಖತಿಯೊಳೈದಿ ಭಜಿಸೆ ಅತಿಶಯದ ವರವನಿತ್ತೆ 2
ದನುಜ ಕೋಪದಿಂದ ತನ್ನ ತನುಜನನ್ನು ಬಾಧೆಗೊಳಿಸೆ
ಮನುಜ ಸಿಂಹನಾಗಿ ಭಕ್ತಗನುಪಮಾದ ಹರುಷವಿತ್ತೆ 3
ಮಕರ ಬಾಧೆಯಿಂದ ಕರಿಯು ಸಕಲಕರ್ತನೆನುತಲೊದರೆ
ಅಖಿಳ ದೈವಂಗಳಿರಲು ಬಕವಿರೋಧಿ ನೀನೆ ಪೊರೆದೆ 4
ಕೂರ್ಮ ಕ್ರೋಢ ಸಿಂಹ ಬ್ರಾಹ್ಮಣೇಂದ್ರ ರಾಮಕೃಷ್ಣ
ಬುದ್ಧ ಕಲ್ಕಿ ದಾನವಾರಿ ಸಲಹೊ ಎನ್ನ 5
ಸರ್ವಲೋಕ ಜನಕ ನಿನ್ನ ಸರ್ವಕಾಲದಲ್ಲಿ ನೆನೆವೆ
ವಿನುತ ಸರ್ವಸೌಖ್ಯ ನೀಡು ಹರಿಯೆ 6
ಕಂಜಜೇಶ ಪನ್ನಗೇಶ ನಿರ್ಜರೇಶ ಮುಖ್ಯ
ದಾಸವರದ ಶೇಷ ಭೂಧರೇಶ ಎನ್ನ ಸಲಹೊ ಬೇಗ 7