ಏತರಿಂದ ಬ್ರಾಹ್ಮಣಿಕೆ ಪರಮಾತ್ಮನೆತಾನೆಂದು ತಿಳಿಯದ ನರನಲಿ ಪ
ಜನಿವಾರ ನೋಡಿ ಬ್ರಾಹ್ಮಣ ನೆಂದರೆ ಸು-ಮ್ಮನೆ ಮರಕೆ ಬಳ್ಳಿ ಸುತ್ತಿಲ್ಲವೆಹಣೆಯ ಬಟ್ಟದ ನೋಡಿ ಬ್ರಾಹ್ಮಣ ನೆಂದರೆಹಾದಿ ಕಲ್ಲಿಗೆ ಸುಣ್ಣ ಬರೆದಿಲ್ಲವೆ1
ಜುಟ್ಟು ನೋಡಿ ಇವ ಬ್ರಾಹ್ಮಣ ನೆಂದರೆಜುಟ್ಟಿನ ಗುಬ್ಬಿಯು ತಾನಿಲ್ಲವೆಉಟ್ಟ ಧೋತ್ರವ ನೋಡಿ ಬ್ರಾಹ್ಮಣ ನೆಂದರೆಉಟ್ಟುದಿಲ್ಲವೆ ಮನೆಯ ನಡುಗಂಬ 2
ಬ್ರಾಹ್ಮಣನಾದರೆ ಬ್ರಹ್ಮ ಸರ್ವವು ಆಗಿಬ್ರಹ್ಮವಖಂಡದಿ ಭೇದವಿಲ್ಲದೆಬ್ರಹ್ಮ ಚಿದಾನಂದ ಗುರುನಾಥನಾಗಿಯೆಬ್ರಹ್ಮವ ಕಂಡವನೀಗ ಬ್ರಾಹ್ಮಣ3