ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿರಾಜ ಚಿತ್ತವುದಾರ ಜೀಯಾ | ನಾ ನಿನ್ನ ಪಾದಕ್ಕೆರಗಿ ಯಾಚಿಸುತಲಿ ಮುಗಿವೆನು ಕೈಯಾ | ನೆರೆ ನಂಬಿದವರನುಎರವು ಮಾಡಲು ನಿನಗೊಳಿತೇನಯ್ಯಾ | ಪಿಡಿ ಬೇಗ ಕೈಯಾ ಪ ಕರುಣಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವಂಕಟ ಅ.ಪ. ಅಪಾರ ಮಹಿಮಾ ಆಪದ್ಬಂಧೂ | ಆಪನ್ನರ ಪಾಲಿಪ ವ್ಯಾಪಾರ ನಿನಗಲ್ಲದೆ ಮತ್ತೊಂದೂ | ನಾ ಕಾಣೆನೊ ಜಗದಿಭೂಪಾನೆ ಭೂಮಾ ಗುಣ ಗಣ ಸಿಂಧೂ | ಸ್ವಾಮಿಯೆ ಸಿರಿಗೆಂದೂ ||ಪಾಪದ ಪಂಕವು ಲೇಪವಾಗದಂ | ತೀ ಪರಿಪಾಲಿಸೊ ಶ್ರೀಪತಿ ಅಂಜನ 1 ತರು ಜಾತಿ ಮೃಗಪಕ್ಷಿಗಳಾಕಾರ | ಮೊದಲಾದ ರೂಪದಿಸುರರೂ ಕಿನ್ನರರೂ ತಮ್ಮ ಪರುವಾರ | ಒಡಗೂಡಿ ನಿನ್ನಾಶರಣರ ಚರಣಾರಾಧನೆಗೆ ವಿಸ್ತಾರ | ಈ ಬಗೆ ಶೃಂಗಾರಾ ||ದೊರೆತನ ಠೀವಿಗೆ ಧರಣಿ ಮಂಡಲದಿ | ಸರಿಗಾಣೆನೊ ಹೇ ತಿರುಪತಿ ವೆಂಕಟ 2 ಫಣಿ 3 ಕಲಿಯುಗದೊಳಗೀ ಪರ್ವತದಲ್ಲಿ | ಸರಿಗಾಣೆನೊ ಎಂದುನೆಲೆಸೀದೆ ನೀನೆ ಈ ಸ್ಥಳದಲ್ಲಿ | ವೈಕುಂಠಕಿಂತನೆಲೆಯಾ ವೆಗ್ಗಳವೆಂದು ನೀ ಬಲ್ಲಿ | ಅದ ಕಾರಣದಲ್ಲಿ ||ಜಲಜ ಭವಾದ್ಯರು ಒಲಿದೊಲಿಯುತ | ತಲೆದೂಗುವರೈ ಭಳಿರೆ ಕಾಂಚನ 4 ಸುವರ್ಣ ಮುಖರಿ ತೀರವಾಸ | ಆ ಬ್ರಹ್ಮೋತ್ಸವನವರಾತ್ರಿಯಲ್ಲಿ ನೋಡಲು ಶ್ರೀಶ | ಸಂ ಪದವಿಯನಿತ್ತುಕಾವನು ಕಲುಷದ ಭಯ ಬರಲೀಸ | ಶ್ರೀ ಶ್ರೀನಿವಾಸ ||ಶ್ರೀವರ ಭೂಧರ ವ್ಯಾಸವಿಠಲ* ಪ | ರಾವರೇಶ ಶ್ರೀ ದೇವನೆ ದೇವಾ 5
--------------
ವ್ಯಾಸವಿಠ್ಠಲರು