ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹುಚ್ಚು ಮುಂಡೆ ನೀನಾಗಬೇಡ ಹೇಳುವೆ ಕೇಳುಹುಚ್ಚು ಮುಂಡೆ ಹುಚ್ಚು ಮುಂಡೆಯು ಅಲ್ಲಬ್ರಹ್ಮವೇ ನೀನಾಗಿಹೆ ಹುಚ್ಚು ಮುಂಡೆಪಸರ್ವದೇಹಕೆ ನರದೇಹವು ಉತ್ತಮ ಹುಚ್ಚು ಮುಂಡೆಇರುವ ದೇಹದಿ ನಿನ್ನ ಸಾರ್ಥಕ ಮಾಡಿಕೋ ಹುಚ್ಚು ಮುಂಡೆಉರ್ವಿಪ್ರಪಂಚವು ಸತ್ಯವೆಂದು ಎನಬೇಡ ಹುಚ್ಚು ಮುಂಡೆತೋರುವುದಿಂದ್ರಜಾಲದ ತೆರದಿ ಸ್ವರ್ಗ ಮತ್ರ್ಯವುಹುಚ್ಚು ಮುಂಡೆ1ಸತಿಸುತರನು ನೀನು ನಂಬಿ ಕೆಡಬೇಡ ಹುಚ್ಚು ಮುಂಡೆಸತಿಯೆಷ್ಟು ಸುತರೆಷ್ಟು ಆದರು ನಿನಗೆ ಹುಚ್ಚು ಮುಂಡೆಮಿತಿಯಿಲ್ಲದ ದೇಹವಾದವು ನಿನಗೆ ಹುಚ್ಚು ಮುಂಡೆಮತಿಗೆಟ್ಟು ಮರೆತು ಜನ್ಮವನಂತವ ತಿರುಗುವರೆ2ಸ್ವಪ್ನದ ಸುಖದಂತೆ ಸಂಸಾರವಿದು ಮೃಷೆ ಹುಚ್ಚು ಮುಂಡೆಇರುವೆನಾಚಂದ್ರಾರ್ಕವೆಂದು ಎಂಬೆಯೋ ಹುಚ್ಚು ಮುಂಡೆಅಪ್ಪಯ್ಯ ಹೋದನು ಮುತ್ತಯ್ಯ ಹೋದನು ಈ ಪರಿಯಿಂದೆ ಹುಚ್ಚು ಮುಂಡೆಮುಪ್ಪಾದೆ ಇಂತು ಭವದ ಸುಳಿಯಲಿ ಬಿದ್ದು ಹುಚ್ಚು ಮುಂಡೆ3ಕಾರ್ಯೋಪಾಧಿ ಯಿಂದ ಹುಚ್ಚು ಮುಂಡೆ ನೀನಾದೆ ಹುಚ್ಚುಮುಂಡೆಕಾರ್ಯಕಾರಣ ಉಪಾಧಿಯು ನಿನಗಿಲ್ಲವು ಹುಚ್ಚು ಮುಂಡೆಕಾರ್ಯಗುಣಗಳಿಂದ ನಿನ್ನ ತಿಳಿವುದು ಕಷ್ಟ ಹುಚ್ಚು ಮುಂಡೆಕಾರಣ ಗುಣದಲ್ಲಿ ತಿಳಿಯೆ ತಿಳಿಸುವೆ ನಿನ್ನ ಹುಚ್ಚು ಮುಂಡೆ4ಹೊಂದು ಸದ್ಗುರುಪಾದ ತಿಳಿ ನಿನ್ನ ಬ್ರಹ್ಮೆಂದು ಹುಚ್ಚು ಮುಂಡೆನಿಂದುನಾಶಿಕಗೊನೆಯ ನೋಡಿ ದೃಷ್ಟಿಯಿಡು ಹುಚ್ಚು ಮುಂಡೆಚಂದ್ರರು ಶತಕೋಟಿ ಬೆಳಗುವರು ತಾವಲ್ಲಿ ಹುಚ್ಚು ಮುಂಡೆಸುಂದರ ಚಿದಾನಂದನಾಗುವೆ ನಿಜದಲ್ಲಿ ಹುಚ್ಚು ಮುಂಡೆ5
--------------
ಚಿದಾನಂದ ಅವಧೂತರು