ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ ತನ್ನಿಂದ ತಾನೊಲಿದು ಖೂನದೋರಿತು ಘನ ಗುರು ಕೃಪೆ ಎನಗೆ 1 ಸೋಮಾರ್ಕದ ಮಧ್ಯಸ್ವಾಮಿ ಸದ್ಗುರು ಪಾದ ನಮಿಸಿ ನಿಜದೋರಿತು ಜುಮುಜುಮುಗಟ್ಟಿ ರೋಮಾಂಚನಗಳುಬ್ಬಿ ಬ್ರಹ್ಮಾನಂದವಾಯಿತು 2 ನಾಮ ಸೇವಿಸಿ ಮಹಿಪತಿಗೆ ಸವಿದೋರಿತು ಪ್ರೇಮಭಾವನೆಯೊಳಗೆ ಧಿಮಿಧಿಮಿಗುಡುತ ಬ್ರಹ್ಮಾನಂದದ ಸುಖ ಅನುಭವಿಸಿತೆನಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ನಿಜನೋಡಿ ನಮ್ಮ ನೇಮನಿತ್ಯ ಸಾಧು ಜನರಿಗೆ ನಡೆವದು ಸತ್ಯ ಧ್ರುವ ಅನುಸಂಧಾನ ತ್ರಿಕಾಲ ಸಂಧ್ಯಾನ ನಿತ್ಯ ನಿತ್ಯದಿತ್ಯರ್ಥದ ನಿಜಸುಷ್ಠಾನ 1 ದೇವದೇವೇಶನಾರಾಧನೆಯು ಭುವನತ್ರಯದಲಿದೆ ಸರ್ವಸಾಧನೆಯು 2 ಕರ್ಮಹರಿಸಿದ ನಿಮಿಷದೊಳಗೆ ಬ್ರಹ್ಮಾನಂದವಾಯಿತು ಮಹಿಪತಿಗೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು