ಇದೇ ನಿತ್ಯನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ ಧ್ರುವ
ಬಿಡದಿಹುದೇ ಸತ್ಸಂಗಾ
ನೋಡಿ ಇದೇವೆ ಶಿರಸಾಷ್ಟಾಂಗಾ
ಕಡದ್ಹೋಯಿತು ಭವದುಸ್ಸಂಗಾ
ದೃಢಮಾಡಿ ಅಂತರಂಗಾ1
ನಮೃತಲಿಹುದೆ ನಮನಾ
ನೇಮದಿಂದ ನಡೆದವರು ದಿನಾ
ಬ್ರಹ್ಮಾನಂದದೋರುವ ಸಾಧನ 2
ಗುರ್ವಿನಂಘ್ರಿಗೆ ಎಡೆಮಾಡಿ
ಅರ್ವಿನೊಳಾದ ಮಹಿಪತಿ ನೋಡಿ
ಗರ್ವ ಪುಣ್ಯೆಂಬುದು ಈಡ್ಯಾಡಿ
ಸರ್ವಪಾಪ ಹೋಯಿತು ನೋಡಿ 3