ಪಾಹಿಮಾಂ ರಾಮಚಂದ್ರ ಅಚಲಾಂ ಭಕ್ತಿಂ
ದೇಹಿ ಕಲ್ಯಾಣಸಾಂದ್ರ ಪ.
ಶ್ರೀಹರಿ ನಾಗಾರಿವಾಹನ ಶ್ಯಾಮಲ-
ದೇಹ ರಾಕ್ಷಸ ಸಮೂಹ ವಿದಾರಕ ಅ.ಪ.
ಸಜ್ಜನ ಕಲ್ಪವೃಕ್ಷ ಪಾಪಾಂಕುರ-
ಭರ್ಜನ ವಿಬುಧಪಕ್ಷ
ಧೂರ್ಜಟಿಸಖ ದೂಷಣಾರಿ ದ್ಯುಮಣಿಕೋಟಿ-
ಪ್ರಜ್ವಲಿಪ ಪರಮ ಜಗಜ್ಜೀವನಧಾಮ
ಪೂರ್ಣಬ್ರಹ್ಮ ರಘುವಂ-
ಜಯಾಕಾಂತ ಪ್ರಭುವೆ 1
ವರಾಹ ಪ್ರ-
ಹ್ಲಾದವರದ ಗುಣಧಾಮ
ಸಾಧುವಟುವೇಷವಿನೋದ ಭಾರ್ಗವ ಬಹು
ಕ್ರೋಧಿ ಕ್ಷತ್ರಿಯಕುಲ ಭೇದಿ ರಾವಣಾಂತಕ
ಕುವಾದಿಜನದುರ್ಬೋಧಬದ್ಧವಿ-
ಶ್ರೀಧರ ರಮಾಮೋದಮಾನಸ 2
ಕಾಶಿಮಠಸ್ಥ ಯತಿ ಪರಂಪರ್ಯ-
ಭೂಷಣ ಶುದ್ಧಮತಿ
ಶ್ರೀ ಸುಕೃತೇಂದ್ರ ಸನ್ಯಾಸಿ ಪೂಜಿತಪಾದ
ವಾಸುದೇವ ತವ ದಾಸ್ಯವ ಪಾಲಿಸು
ಸುಭದ್ರ ಶ್ರವಣ ಪ-
ಭವ ರುಗ್ಭೇಷಜನೆ ನರಕೇಸರಿಯೆ ಶ್ರೀ ವ್ಯಾಸ ರಘುಪತಿ 3
ಪಾರಗಾಣರು ನಿನ್ನಯ ಬ್ರಹ್ಮಾದ್ಯರು
ಭೂರಿಗುಣದ ಮಹಿಮೆಯ
ಸೂರಿಜನಪ್ರೀತ ಸೀತಾನಯನ ಚ-
ಕೋರಚಂದ್ರನು ಮಹೋದಾರ ಶಾಙ್ರ್ಗಧರ
ಮೀರಣಾತ್ಮಜವರದ ನತಮಂದಾರ ಕೈರವಶ್ಯಾಮ ರಾಮನ 4
ಪ್ರಣವರೂಪ ನಿರ್ಲೇಪ ನಿತ್ಯಾತ್ಮದು-
ರ್ಜನವನೋದ್ದಹನೋದ್ದೀಪ
ಮನುಕುಲಮಣಿ ಮುನಿಗಣ ಸಮಾಹಿತ ಜನಾ-
ರ್ದನ ಬ್ರಹ್ಮಾದ್ಯಖಿಳ ಚೇತನರು ನಿನ್ನಾಧೀನ
ಚಿದಾನಂದೈಕ ದೇಹನೆ
ಭಕುತಿ ಭಾಗ್ಯವನು ಪಾಲಿಸು 5