ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಸ್ಮರಣೆಯಿಂದ ಸಕಲ ಪಾಪಹರ ರಾಮ ರಾಮ ಎನ್ನಿರೊವ್ಯೊಮಕೇಶನ ದಿವ್ಯತಾರಕ ಮಂತ್ರವು ಪ.ಶತಕೋಟಿ ರಾಮಾಯಣದ ಬೀಜಾಕ್ಷರ ರಾಮ ರಾಮ ಎನ್ನಿರೊಕ್ಷಿತಿಜೆಯ ಪ್ರಾಣದ್ವಲ್ಲಭ ಶ್ರೀದಶರಥರಾಮ ರಾಮ ಎನ್ನಿರೊ 1ಪಾಮರರೆಲ್ಲರು ಪಂಡಿತರಾದರು ರಾಮ ರಾಮ ಎನ್ನಿರೊಆ ಮೋಕ್ಷ ಕರತಳವಾಹುದು ಕೊಂಡಾಡೆ ರಾಮ ರಾಮ ಎನ್ನಿರೊ 2ಮಖಕೋಟಿಗಧಿಕ ಮಹಾಪುಣ್ಯದಾಯಕ ರಾಮ ರಾಮ ಎನ್ನಿರೊಮುಕ್ತಾಮುಕ್ತಾರ್ಚಿತ ಕರುಣವಾರಿನಿಧಿ ರಾಮ ರಾಮ ಎನ್ನಿರೊ 3ಭಕ್ತವತ್ಸಲ ಭಾಗ್ಯಭೂಷಿತಭವಹರರಾಮ ರಾಮ ಎನ್ನಿರೊನಿಖಿಲ ಭುವನಪತಿ ಬ್ರಹ್ಮಾದಿಸುರವಂದ್ಯ ರಾಮ ರಾಮ ಎನ್ನಿರೊ 4ಅಂಜನೆಜಾತಪೂಜಿತ ಪಾದವಾರಿಜ ರಾಮ ರಾಮ ಎನ್ನಿರೊಕಂಜನೇತ್ರಕಂಜಸಖಅನಂತಪ್ರಭ ರಾಮ ರಾಮ ಎನ್ನಿರೊ5ದಶಶಿರಮರ್ದನ ವಿಭೀಷಣ ವರಪ್ರದ ರಾಮ ರಾಮ ಎನ್ನಿರೊಸುಶರಧಿ ಬಂಧನ ಸುಗ್ರೀವ ಸಂಸೇವ್ಯ ರಾಮ ರಾಮ ಎನ್ನಿರೊ 6ಲಕ್ಷ್ಮಣ ಭರತ ಶತ್ರುಘ್ನಾರಾಧಿತ ರಾಮ ರಾಮ ಎನ್ನಿರೊಋಕ್ಷವರಪ್ರದ ರಘುಕುಲಾಂಬುಧಿಚಂದ್ರ ರಾಮ ರಾಮ ಎನ್ನಿರೊ 7ಜ್ಞಾನಾನಂದ ಬಲಾತ್ಮ ಪರಬ್ರಹ್ಮ ರಾಮ ರಾಮ ಎನ್ನಿರೊಮೌನಿನಿಕರಧ್ಯೇಯಪುಣ್ಯಪುರುಷಗೇಹ ರಾಮ ರಾಮ ಎನ್ನಿರೊ8ಪ್ರಸನ್ನಮೂರುತಿ ಪ್ರಸನ್ನಾನನ ಪರಮಾತ್ಮ ರಾಮ ರಾಮ ಎನ್ನಿರೊಪ್ರಸನ್ನನಿಲಯ ನಿತ್ಯಪ್ರಸನ್ನವೆಂಕಟ ರಾಮ ರಾಮ ರಾಮ ಎನ್ನಿರೊ 9
--------------
ಪ್ರಸನ್ನವೆಂಕಟದಾಸರು